IMG-20240114-WA0007

ವಾಹನ ಸವಾರರು ಕಾನೂನು ಉಲ್ಲಂಘನೆ ಮಾಡಬಾರದು : ಪಿಎಸ್ಐ ವಿಜಯ್ ಪ್ರತಾಪ್

ಕರುನಾಡ ಬೆಳಗು ಸುದ್ದಿ 

ಯಲಬುರ್ಗಾ,14- ಪ್ರತಿಯೂಬ್ಬ ವಾಹನ ಸವಾರರು ಕಾನೂನು ಉಲ್ಲಂಘನೆ ಮಾಡಬಾರದು ಮತ್ತು ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಮನುಷ್ಯನು ಒಮ್ಮೆ ಹುಟ್ಟು ವದು ಅಮೂಲ್ಯವಾದ ಈ ಜೀವನವನ್ನು ಆತುರದಿಂದ ಅಪಘಾತದಿಂದ ಹಾಳುಮಾಡಿಕೂಳ್ಳಬೇಡಿ ಸಾರ್ವಜನಿಕರು ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಿ ವಾಹನ ಸವಾರರು ಚಾಲನೆ ಮಾಡಬೇಕು. ಮದ್ಯಪಾನ ಮಾಡುವಾಗ ಪ್ರತಿಯೊಬ್ಬರಿಗೂ ಸುರಕ್ಷಿತವಾಗಿ ಚಾಲನೆ ನಿಮ್ಮ ಪ್ರಾಣ ರಕ್ಷಣೆ ನಿಮ್ಮ ಕೈಯಲ್ಲಿ ಎಂದು ಪಿಎಸ್ಐ ವಿಜಯ್ ಪ್ರತಾಪ್ ಹೇಳಿದರು

ತಾಲೂಕಿನ ಪೊಲೀಸ್ ಠಾಣೆಯ ವತಿಯಿಂದ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮ ಜರುಗಿತು ಉಪ ಅರಕ್ಷಕ ವಿಜಯ ಪ್ರತಾಪ ಅವರು ಮಾತನಾಡಿ ಅವರು ಹೆಚ್ಚು ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ 7 ದಿನಗಳ ಕಾಲ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತಿದೆ. ಸಾರಿಗೆ ಇಲಾಖೆ ಮತ್ತು ಸಂಚಾರ ನಿಯಮಗಳು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು ಯಲಬುರ್ಗಾ ಪಿಐಐ ಪ್ರತಾಪ ಮಾತನಾಡಿ ವಾಹನ ಚಾಲಕರು ಕಡ್ಡಾಯವಾಗಿ ರಸ್ತೆ ನಿಯಮ ಪಾಲಿಸುವುದರ ಮೂಲಕ ರಸ್ತೆ ಅಪಘಾತ ತಡೆಗಟ್ಟಿ ಜೀವ ರಕ್ಷಿಸಬೇಕು .ಸಾರ್ವಜನಿಕರು ಬಸ್ಸುಗಳನ್ನು ಬಳಸಬೇಕು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸಿ ವಾಹನ ಚಲಾಯಿಸಬೇಕು ರಸ್ತೆ ಅಪಘಾತ ತಪ್ಪಿಸಲು ಸಂಚಾರ ನಿಯಮಗಳು ಮತ್ತು ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮ ಆಯೋಜಿಸಲಾಗಿದೆ ಆದ್ದರಿಂದ ಪಟ್ಟಣದ ನಾಗ್ ಪ್ಯಾಸೆಂಜರ್ ಆಟೋ ಚಾಲಕರ ಸಂಘ, ಮಾರುತೇಶ್ವರ ಸರಕು ಸಾಗಾಣಿಕೆ ಚಾಲಕರು ಮತ್ತು ಮಾಲಕರ ಸಂಘ, ಕರುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಚಾಲಕರ ಸಂಘ, ಹಾಗೂ ವಿಜಯಗಾದೇವಿ ಟೆಂಪೋ ಟ್ರಾವೆಲರ್ಸ್ ಸಂಘದವರು

ನೀವು ಹೊಂದಿರುವ ವಾಹನಕ್ಕೆ ಸರಿಯಾದ ದಾಖಲೆಗಳನ್ನು ಕಾಪಾಡಿಕೊಳ್ಳಬೇಕು ಚಾಲಕರ ಪರವಾನಗಿ ಲೈಸನ್ಸ್ ಮತ್ತು ಇನ್ಸೂರೇಶನ್ ಗಾಡಿಯ ಪರ್ಮಿಟ್,

ಮುಂತಾದ ಅಗತ್ಯ ದಾಖಲಾತಿಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದುಕೊಳ್ಳಬೇಕು. ಹಾಗೂ ಪ್ಯಾಸೆಂಜರ್ ವಾಹನದವರು ವಾಹನದ ಮೇಲೆ ಪ್ರಯಾಣಿಕರನ್ನು ಅತಿಯಾಗಿ ಕೂಡಿಸಿಕೊಂಡು ಸಂಚಾರ ನಿಯಮ ಉಲಂಘನೆ ಮಾಡಬಾರದು. ಮುಖ್ಯ ರಸ್ತೆಯಲ್ಲಿ ವಾಹನಗಳು ಸರಿಯಾಗಿ ಪಾರ್ಕ್ ಮಾಡಬೇಕು ನಿಮ್ಮ ಸುರಕ್ಷತೆಗಾಗಿ ಸರಿಯಾಗಿ ನಿಯಮ ಪಾಲಿಸಬೇಕು ಎಂದು ಸ್ಥಾಪಿಸಲಾಗಿದೆ.

ಈ ಸಂದರ್ಭದಲ್ಲಿ ಠಾಣೆಯ ಎ.ಎಸ್.ಐ ಪ್ರಕಾಶ, ಸಿಬ್ಬಂದಿಗಳಾದ ಗಂಗಾಧರ ಹಿರೇಮಠ.ತಿಮ್ಮನಗೌಡ. ಸ ರಾಜಾಬಕ್ಷಿ ಬಸಯ್ಯ, ಲಕ್ಷ್ಮಣ, ಮತ್ತು ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!