2bcb699d-fbf1-4156-a11b-76ec5b682a98

ಮತ್ತೊಮ್ಮೆ ನರೇಂದ್ರ ಮೋದಿಯವರು ಮತ್ತೆ ದೇಶದ ಪ್ರಧಾನಿಯಾಗಬೇಕು

ಸಂಸದ ಸಂಗಣ್ಣ ಕರಡಿ ಅಭಿಮತ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ2 ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವದು ಖಚಿತ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕೇಂದ್ರ ಸರಕಾರದಿಂದ ಹಲವಾರು ಜನಪರ ಯೋಜನೆಯಗಳನ್ನು ಜಾರಿಗೊಳಿಸಿದ್ದಾರೆ ಉಚಿತ ಪಡಿತರ ವಿತರಣೆ ಮಾಡಿದ್ದಾರೆ ಉತ್ತಮ ಆರೋಗ್ಯಕ್ಕಾಗಿ ಆಯುಷ್ಠಾನ ಭಾರತ್ ಕಾರ್ಡ್, ಮಹಿಳೆಯರು ಯಾರು ಬಹಿರ್ದೇಸೆಗೆ ತೆರಳ ಬಾರದು ಎಂಬ ಉದ್ದೇಶದಿಂದ ಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಮನೆ.ಮನೆಗೂ ಶೌಚಾಲಯ ನಿರ್ಮಾಣ, ಮಹಿಳೆಯರು ಕಟ್ಟಿಗೆಯಿಂದ ಅಡುಗೆ ಮಾಡಿ ಹೊಗೆ ಸೇವನೆ ಮಾಡಿದ ಅನೇಕ ಮಹಿಳೆಯರು ಅನಾರೋಗ್ಯದಿಂದ ಬಳಲುತ್ತಿದ್ದರು.

ಯಾವ ಮಹಿಳೆಯರು ಕಟ್ಟಿಗೆಯಿಂದ ಅಡುಗೆ ಮಾಡಬಾರದೆಂದು ಉಜ್ವಲ ಯೋಜನೆಯಡಿ ಗ್ಯಾಸ್ ವಿತರಣೆ ಮಾಡಲಾಗಿದೆ. ಜನ್ ಧನ್ ಖಾತೆ ,ಬಡವರಿಗೆ ಕಡಿಮೆ ದರದಲ್ಲಿ ಔಷಧಿ ದೊರಕಲಿ ಎಂದು ಜನ ಔಷಧಿ ಮಳಿಗೆ ಪ್ರಾರಂಭಿಸಲಾಗಿದೆ ಸಣ್ಣ ಹಿಡುವಳಿ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ,ಜಲ ಜೀವನ ಮಿಷನ್ ಯೋಜನೆಯಡಿ ತಾಯಂದಿರ ಕಷ್ಟ ನಿವಾರಣೆಗಾಗಿ ಸುಮಾರು 10 ಕೋಟಿ ಮನೆ. ಮನೆಗಳಿಗೆ. ನೀರಿನ.ನಲ್ಲಿ ಸಂಪರ್ಕ ಒದಗಿಸಲಾಗಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ಪ್ರತಿ ಕುಟುಂಬಕ್ಕೆ 5.00 ಲಕ್ಷ ವರೆಗೆ ವಿಮಾ ಹಾಗೂ ನಗದು ರಹಿತ ಚಿಕಿತ್ಸಾ ಸೌಲಭ್ಯ.ನೀಡಲಾಗಿದೆ

ನಮ್ಮ ಪ್ರಧಾನಿ ನರೇಂದ್ರ ಮೋದಿಯವರಿಗೆ ನೆರೆ ರಾಷ್ಟ್ರದವರು ಹಾವಾಡಿಗರ ದೇಶ ಭಾರತ ಎಂದು ಕರೆಯುತ್ತಿದ್ದರು ಇಡಿ ವಿಶ್ವವೇ ಭಯಭೀತಿಯಲ್ಲಿತ್ತು ಅಂತಹ ಸಂದರ್ಭದಲ್ಲಿ ಕರೋನಾ ನಮ್ಮ ದೇಶದಲ್ಲಿ ಸಾಂಕ್ರಾಂಮಿಕ ರೋಗ ಹರಡಿದಾಗ ಅಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ದಿಟ್ಟ ನಿರ್ಧಾರ ತಗ್ಗದುಕೂಂಡು ಅದರ ವಿರುದ್ಧ ಹೋರಾಡಿ, ಸುಮಾರು 220 ಕೋಟಿಗೂ ಅಧಿಕ ಲಸಿಕೆಗಳನ್ನು ಉಚಿತವಾಗಿ ನೀಡಿ ಕೋವಿಡ್ ಮಾಹಾಮಾರಿಯ ರೋಗವನ್ನು ತಡೆಗಟ್ಟಿದರು
ನಮ್ಮ ದೇಶದ ಅಭಿವೃದ್ದಿಯನ್ನು ನೋಡಿ ಭಾರತಕ್ಕೆ ನರೇಂದ್ರ ಮೋದಿ ವಿಶ್ವಗುರು ಎಂದು ಕರೆಯುತ್ತಿದೆ ಇದಕ್ಕೆ ನಿದರ್ಶನ. ಅವರು ದೇಶದ ರೈತರ ಮೇಲೆ ಇಟ್ಟ ಕಾಳಜಿ .ದಕ್ಷ.ಆಡಳಿತ ದಿಟ್ಟ ನಿರ್ಧಾರ.ಬೇಟಿ ಪಢಾವೋ, ಬೇಟಿ ಬಚಾವೋ ಯೋಜನೆಯಡಿ ನಮ್ಮ ಮನೆಯ ಹೆಣ್ಣುಮಕ್ಕಳ ಸಂರಕ್ಷಣೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗವಕಾಶ ಕಲ್ಪಿಸಲಾಗಿದೆ. ಸಂಸದರ ಆದರ್ಶ ಗ್ರಾಮ ಯೋಜನೆ.ಪ್ರಧಾನ ಮಂತ್ರಿ ಮುದ್ರಾ ಯೋಜನಾ.ಪೋಷಣ ಅಭಿಯಾನ.ಅಟಲ್ ಪೆನ್ಸನ್ ಯೋಜನೆ‌ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ. ಪ್ರಧಾನ ಮಂತ್ರಿ ಸುರಕ್ಷಾ ಯೋಜನಾ.
ಸ್ಮಾರ್ಟ ಸಿಟಿ ಯೋಜನೆ.ಸ್ಟಾರ್ಟ್ ಅಪ್ ಇಂಡಿಯಾ ಯೋಜನೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ಭರವಸೆಯಡಿ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ ಹಾಗಾಗಿ ಈ ದೇಶಕ್ಕೆ ಮತ್ತೋಮ್ಮೆ ನರೇಂದ್ರಮೋದಿ ಪ್ರಧಾನಿಯಾಗಬೇಕು ಎಂದು ಹೇಳಿದರು.
ನಂತರ ಗಣಿ ಮತ್ತು ಭೂವಿಜ್ಞಾನ. ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ. ಹಿರಿಯ ನಾಗರಿಕ ಸಬಲೀಕರಣ. ಧಾರವಾಡ ಜಿಲ್ಲೆಯ ವಸ್ತುವಾರಿ. ಮಾಜಿ ಸಚಿವ ಹಾಲಪ್ಪ ಆಚಾರ ಮಾತನಾಡಿದ ಅವರು ಸ್ವಾತಂತ್ರ್ಯ ಸಿಕ್ಕು ಅನೇಕ ವರ್ಷಗಳಾದರು ದೇಶ ಅಭಿವೃದ್ಧಿಯಾಗಿರಲಿಲ್ಲ ನಂತರ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ದೇಶದ ಸಮಗ್ರ ಅಭಿವೃದ್ಧಿ ಮಾಡಿ. ದಕ್ಷ. ಪ್ರಮಾಣಿಕ ಆಡಳಿತ ನೀಡಿ ಇಡೀ ವಿಶ್ವವೇ ನಮ್ಮ ದೇಶದ ಕಡೇ ತಿರುಗಿ ನೀಡುವಂತೆ ಮಾಡಿದರು ಮತ್ತು ದೇಶದಲ್ಲಿ ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ಕರೋನಾ ಲಸಿಕೆಯನ್ನು ಕಂಡುಹಿಡಿದು ದೇಶದ ಸಾರ್ವಜನಿಕರಿಗೆ ಲಸಿಕೆ ಯನ್ನು ಉಚಿತವಾಗಿ ನೀಡಿ ಕೋಟಿ ಕೋಟಿ ಜನರ ಜೀವ ರಕ್ಷಣೆ ಮಾಡಿದರು ಸ್ವಚ್ಛ ಮತ್ತು ಸುದ್ದವಾದ ರೈಲ್ವೆ ನಿಲ್ದಾಣ ಜನ ಸಾಮಾನ್ಯಜನರು ಪ್ರಯಾಣ ಮಾಡಲು ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ದಾರೆ.

ಪ್ರಧಾನ ಮಂತ್ರಿ ಜೀವನ್ ಜೋತಿ ಯೋಜನೆ ಇನ್ನೂ ಅನೇಕ ಸರಕಾರದ ಅನೇಕ ಸೌಲಭ್ಯಗಳು ಇವೇ ಅವುಗಳನ್ನು ಪಡೆದುಕೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿ ನಮ್ಮ ತಾಲೂಕಿನಲ್ಲಿ ಕೊರತೆಯಿಲ್ಲ ಇದಕ್ಕೆ ನೀತಿನ್ ಗಡ್ಕರಿ ಯವರು ಬಿಜಾಪೂರ ಮತ್ತು ಬೆಂಗಳೂರು ಏಕ್ಸ ಪ್ರೇಸ್ ಹೈವೆ ನಿರ್ಮಿಸಲು 52 ಸಾವಿರ ಕೋಟಿ ವೆಚ್ಚದಲ್ಲಿ ಅನುಮೂದನೆ ಗೊಂಡಿದೆ 10 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.1996ರಲ್ಲಿ ಗಿಣಗೇರಾ ಮಹಿಬೂಬ ನಗರ ರೈಲ್ವೆ ಕಾಮಗಾರಿಗೆ ಚಾಲನೆ ನೀಡಿದವರು ಅದಕ್ಕೆ ಅನುದಾನ ನೀಡಲಿಲ್ಲ,ನಂತರ ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ರೈಲ್ವೆ ಕಾಮಗಾರಿ ಪೂರ್ಣ ಗೊಳಿಸಲಾಯಿತು. ಗದಗ -ವಾಡಿ ರೈಲ್ವೆ ಕಾಮಗಾರಿಯು ನೆನೆಗುದಿಗೆ ಬಿದ್ದಿತು ನಮ್ಮ ಸಂಸದರ ಇಚ್ಛಾಶಕ್ತಿ ಮತ್ತು ಪ್ರಧಾನಿ ನರೇಂದ್ರಮೋದಿಯವರಿಂದ ಪೂರ್ಣ ಗೊಳಿಸಲಾಯಿತು ಎಂದು ಹೇಳಿದರು ನಾನು ಶಾಸಕರಾದ ಮೇಲೆ ನಾನೊಬ್ಬ ರೈತನ ಮಗನಾಗಿ ನಾನು ಶಾಸಕ. ಮಂತ್ರಿ .ಎನ್ನುವ ಅಹಂಕಾರ ವಿಲ್ಲದೆ ಪ್ರಾಮಾಣಿಕವಾಗಿ ರೈತರಿಗೆ ಕೇವಲ ಮೂರು ವರ್ಷದ ಅವದಿಯಲ್ಲಿ 1750 ಕೋಟಿ ರೂಪಾಯಿ ವೆಚ್ಚದಲ್ಲಿ ತಾಲೂಕಿನ ಕೆರೆ ಗಳನ್ನು ಅಭಿವೃದ್ಧಿ ಪಡಿಸಿ ಕೆರೆಗಳಿಗೆ ನೀರು ತುಂಬಿಸಿರುವೆ. ಈ ಭಾಗದ ರೈತರಿಗೆ ಇದರಿಂದ ಬೊರವೆಲ್ ಗೆ ಅಂತರಜಲ ಹೆಚ್ಚಾಗುತ್ತದೆ.

ನಾನು ಈ ಬಾರಿ ತಾಲೂಕಿನಲ್ಲಿ 1ಲಕ್ಷದ.25 ಸಾವಿರ ಎಕರೆ ಏತ ನೀರಾವರಿ ಮಾಡಬೇಕೆಂಬ ಮಾಹಾದಾಸೆ ಇತ್ತು ಆದರೆ ಮತದಾರರು ಕಾಂಗ್ರೇಸ್ ಪಕ್ಷದ ಸುಳ್ಳು ಗ್ಯಾರಂಟಿ ಯೋಜನೆಯನ್ನು ನಂಬಿ ಅಧಿಕಾರಕ್ಕೆ ತಂದರು ಆದರೆ ಅವರಿಗೆ ರಾಜ್ಯದ ಅಭಿವೃದ್ಧಿ ಬೇಕಾಗಿಲ್ಲ .ರೈತರ ಹಿತಾಸಕ್ತಿ ಬೇಕಾಗಿಲ್ಲ.ರೈತ ದೇಶದ ಬೆನ್ನೆಲುಬು. ಅವರು ಗ್ಯಾರಂಟಿ ಯೋಜನೆಗಳ ಗುಂಗಿನಲ್ಲಿದ್ದಾರೆ ಅವರು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅಕ್ಕಿ ಮತ್ತು ಟಾಕ್ಸ. ಹಾಗೂ ದಿನ ಬಳಿಕೆ ದರಗಳು ಹೆಚ್ಚಾಗಿವೆ. ಅವರ ಸುಳ್ಳು ಭರವಸೆಯನ್ನು ನಂಬಿದಿರಿ ಕಾಂಗ್ರೇಸ್ ಪಕ್ಷದವರು ಮರಳಿ ಇತ್ತ ನೊಡುವದೆ ಇಲ್ಲವೆಂದು ಹೇಳಿದರು
ನಂತರ ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕ ಕಾರ್ಯಕ್ರಮ ಕುರಿತು ಮಾತನಾಡಿದರು. ನಂತರ  ಉಜ್ವಲ್ ಯೋಜನೆಯಡಿ ಫಲಾನುಭವಿಗಳಿಗೆ ಎಲ್ ಪಿ. ಜಿ. ಗ್ಯಾಸ್ ವಿತರಣೆ ಮಾಡಲಾಯಿತು  ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಹುಲಿಗೇಮ್ಮ ತಳವಾರ .ಉಪಾಧ್ಯಕ್ಷೆ ಮಂಜುನಾಥ ಶಾಸ್ತ್ರಿ ಹಿರೇಮಠ, ಹಾಲು ಉತ್ಪಾದಕರ ಸಂಘದ ನಿರ್ದೇಶಕ ಶಿವಪ್ಪವಾದಿ ಗ್ರಾಮ ಪಂಚಾಯತಿ ಸದಸ್ಯ ಹುಸೇನಬಿ ಅತ್ತಾರ, ಆನಂದ ಈಳಿಗೇರ,ಗಾಳೇಪ್ಪ ಓಜನಹಳ್ಳಿ ಮುಖಂಡರಾದ ಬಸಲಿಂಗಪ್ಪ ಭೋತೆ. ಶಿವಶಂಕರ ರಾವ್ ದೇಸಾಯಿ .ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ್,ಹಿರಿಯ ಪತ್ರಕರ್ತ ಕೊಟ್ರಪ್ಪ ಮುತ್ತಾಳ. ಅಯ್ಯನಗೌಡ ಕೆಂಚಮ್ಮನವರ ,ನಾಗರಾಜ ಹಾಲಳ್ಳಿ ಯಲಬುರ್ಗಾ ತಾಲೂಕಿನ ಆರ್ಥಿಕ‌ ಸಾಕ್ಷರತೆಯ ಸಲಹೆಗಾರ ಪಂಪನಗೌಡ ಪಾಟೀಲ. ನೋಡಲ್ ಅಧಿಕಾರಿ ಭೀಮರಾವ್, ಅಂಗನವಾಡಿ ಶಿಕ್ಷಕಿಯರು ,ಆಶಾ,ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮತ್ತು ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!