WhatsApp Image 2024-04-01 at 6.23.34 PM

ಸದೃಡ ಭಾರತ ನಿರ್ಮಾಣಕ್ಕೆ ಬಿಜೆಪಿ ಗೆಲ್ಲಿಸಿ : ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಗೆ ಕರೆ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ,1- ನರೇಂದ್ರ ಮೋದಿಯವರು ದೇಶದ ಸಮಗ್ರ ಅಭಿವೃದ್ಧಿ ಮಾಡಿ ಉತ್ತಮ. ದಕ್ಷ. ಪ್ರಮಾಣಿಕ ಆಡಳಿತ ಮಾಡಿ ದೇಶದ ಎಲ್ಲಾ ಜನರ ಪ್ರೀತಿ ವಿಶ್ವಾಸ ಗೆದ್ದ ಜನ ಮೆಚ್ಚಿದ ನಾಯಕ. ದೇಶದ ಹಿರಿಯ ಅಣ್ಣನಾಗಿದ್ದಾರೆ ದೇಶದಲ್ಲಿ 80/.ಪಸ೯ಂಟ ಜನರು ಮೋದಿಯವರು ಇಷ್ಟ ಪಡುತ್ತಾರೆ 2024 ರಲ್ಲಿ ಮತ್ತೊಮ್ಮೆ ಕೇಂದ್ರದಲ್ಲಿ ನರೇಂದ್ರ ಮೋದಿಯವರು ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವದು ಖಚಿತ ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.

ಪಟ್ಟಣದ ಸಾಯಿ ಪ್ಯಾಲೇಸ್ ಸಭಾಂಗಣದಲ್ಲಿ ಕೊಪ್ಪಳ ಲೋಕ ಸಭಾ ಚುನಾವಣೆಯ ಪ್ರಯುಕ್ತ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶದಲ್ಲಿ ನರೇಂದ್ರ ಮೋದಿಯವರು ಅಲೆ ಪ್ರಾರಂಭವಾಗಿದೆ ದೇಶವು ಉಳಿದರೆ ನಾವು ಉಳಿಯಲು ಸಾಧ್ಯ ದೇಶ ಸುಭದ್ರವಾಗಿರಬೇಕಾದರೆ ನರೇಂದ್ರ ಮೋದಿಯವರು ನಮ್ಮ ದೇಶಕ್ಕೆ ಪ್ರಧಾನಿಯಾಗಬೇಕು ಸದ್ರಡ್ ಭಾರತ ನಿಮಾ೯ಣಕ್ಕ ಬಿಜೆಪಿ ಬೆಂಬಲಿಸಿ ಗೆಲಿಸಬೇಕು ಎಂದು ಹೇಳಿದರು ನಂತರ ಕಾರ್ಯಕ್ರಮ ಉದ್ದೇಶಿಸಿ ಗಂಗಾವತಿ ಮಾಜಿ ಶಾಸಕ ಪರಣ್ಣ ಮನವಳ್ಳಿ ಮಾತನಾಡಿದ ಅವರು ನಮ್ಮ ದೇಶ ಪವರ್ ಪುಲ್ ದೇಶ ಎಂದು ತೋರಿಸಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿಯವರು ಇವರು ಪ್ರಧಾನಿ ಯಾದ ಮೇಲೆ ನಮ್ಮ ದೇಶದ ಸಂಸ್ಕಾರ, ಸಂಪ್ರದಾಯ, ಸಂಸ್ಕೃತಿ ಉಳಿದಿರುವದು ಬಿಜೆಪಿ ಪಕ್ಷದಿಂದ ಮಾತ್ರ ಸಾದ್ಯ,ಕಾಂಗ್ರೇಸ್ ಯವರಿಗೆ ಸಂಸ್ಕಾರ ಗೊತ್ತಿಲ್ಲ ನರೇಂದ್ರ ಮೋದಿ ಮೋದಿ ಎಂದವರ ಕೆನ್ನೆಗೆ ಭಾರಿಸಿ ಎಂದು ಹೇಳುವ ಶಿವರಾಜ ತಂಗಡಗಿ ಯವರೆ 130 ಕೋಟಿ ಜನರ ಕೆನ್ನೆಗೆ ಬಾರಿಸುವಿರಾ ಎಂದು ತಂಗಡಗಿ ವಿರುದ್ದ ವಾಘ್ದಾಳಿ ನಡೆಸಿದರು ಕೊಪ್ಪಳ ಲೋಕಸಭೆ ಚುನಾವಣೆಯಲ್ಲಿ ಮೂರು ಬಾರಿ ಬಿಜೆಪಿ ಗೆಲವೂ ಸಾಧಿಸಿದೆ ನಾಲ್ಕನೆ ಬಾರಿಗೆ ಬಿಜೆಪಿ ಪಕ್ಷವು ಗೆಲುವು ಖಚಿತ ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುವದು ಗ್ಯಾರಂಟಿ ಅದಕೋಸ್ಕರ ಮೋದಿ ಅವರು ಕೈ ಬಲಪಡಿಸಲು ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರಗೆ ಬೆಂಬಲಿಸಿ ಎಂದು ಹೇಳಿದರು.

ವಿರೋಧ ಪಕ್ಷದ ಮುಖ್ಯ ಸಚೇತಕ ಮತ್ತು ಕುಷ್ಟಗಿ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ್ ಮಾತನಾಡಿ‌, ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷದ ಮುಖಂಡರು ಬೂತ್ ಮಟ್ಟದಲ್ಲಿ ಮತ ಯಾಚನೆ ಮಾಡುವದರ ಮೂಲಕ ಪ್ರಚಾರ ನಡೆದಿರುವದೂ ಸಂತಸದ ವಿಷಯ .ರಾಜಕೀಯ ಮತ್ತು ಅರ್ಥಶ್ಯಾಸ್ತ್ರ ಗೊತ್ತಿಲ್ಲ ಅವರಿಗೆ ಕಡಿಮೆ ಜ್ಞಾನವಿದೆ ಎಂದು ಹೇಳುವ ರಾಯರಡ್ಡಿ ಇವರು ಇನ್ನೊಬ್ಬರ ಬಗ್ಗೆ ಹಗ್ಗರುವಾಗಿ ಮಾತನಾಡುವದು ಸರಿಯಲ್ಲ ಎಂದರು ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದು, 9 ರಿಂದ 10 ತಿಂಗಳು ಆಯಿತು ಯಾವುದೇ ಅಭಿವೃದ್ಧಿ ಯಾಗದಲ್ಲಿ ಅವರ ಸರಕಾರದಲ್ಲಿ ಗ್ಯಾರಂಟಿ ಬಿಟ್ಟರೆ ಮತ್ತೆನು ಅನುದಾನ ವಿಲ್ಲ ಕಾಂಗ್ರೇಸ್ ಪಕ್ಷವನ್ನುಸೊಲೀಸಬೇಕು ನರೇಂದ್ರಮೋದಿಯವರನ್ನು ನಮ್ಮ ದೇಶದ ನಾಯಕ ಎಂದು ಆಯ್ಕೆ ಮಾಡಬೇಕು ಜಾತಿ ಮತ ಪಂಥ ಮರೆತು ದೇಶ ಸುರಕ್ಷಿತವಾಗಿ ಆರ್ಥಿಕವಾಗಿ ಬೆಳೆಯ ಬೇಕಾದರೆ ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು ಕಾಂಗ್ರೆಸ್ ಪಕ್ಷದವರು ಅಧಿಕಾರದ ದಾಹ ಮತ್ತು ಗ್ಯಾರಂಟಿ ಯೋಜನೆ ಗುಂಗಿನಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು. ಎಂದು ಜೆಡಿಎಸ್ ಪಕ್ಷವು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದೆ ಪ್ರತಿ ಬೂತ್ ಮಟ್ಟದಲ್ಲಿ ಹೆಚ್ಚಿನ ಮತ ಹಾಕಿಸುವ ಮುಖಾಂತರ ಜನರಿಗೆ ಬಿಜೆಪಿ ಪಕ್ಷದ ಯೋಜನೆ ಕುರಿತು ತಿಳಿಸುವ ಮೂಲಕ ಆಶೀರ್ವದಿಸ ಬೇಕೆಂದರು ಮಾಜಿ ಶಾಸಕ ಬಸವರಾಜ ದಡೆಸೂರ ಮಾತನಾಡಿ ದೇಶ ಮತ್ತು ರಾಜ್ಯ ಧರ್ಮ ಸಂಸ್ಕಾರ, ಉಳಿಯ ಬೇಕಾದರೆ ಬಿಜೆಪಿ ಬೆಂಬಲಿಸಿ.ರೈತರ ಪರ ಕಾಳಜಿ ವಹಿಸುವ ಬಿಜೆಪಿಗೆ ಬೆಂಬಲಿಸಿ ಎಂದರು.

ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ದೇವೆಗೌಡ್ರ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸುದೀರ್ಘವಾಗಿ ಚರ್ಚೆ ಮಾಡಿ ಎನ್,ಡಿ,ಎ,ಪಕ್ಷದಲ್ಲಿ ಮೈತ್ರಿಯಾಗಿ ಸಮನ್ವಯ ಸಮಿತಿ ಮಾಡಿ ರಾಜ್ಯದ 28 ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿ,ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಲುವಾಗಿ ನಮ್ಮ ಸಂಪೂರ್ಣ ಶಕ್ತಿಯನ್ನು ದಾರೆ ಏರೆಯ ಬೇಕು ಅಂದಾಗ ಮಾತ್ರ ಗೆಲುವು ಸಾಧ್ಯ ,ಜೆಡಿಎಸ್ ಎಲ್ಲಿದೆ ಎಂದು ಕೇಳುವ ಕಾಂಗ್ರೇಸ್ ನವರು ಮೊದಲು ನಿವೂ ಎಲ್ಲಿದ್ದಿರಿ ಎನ್ನುವದನ್ನು ತೊರಿಸಿ ನಿಮ್ಮ ತಟ್ಟೆಯಲ್ಲಿ ನೋಣ ಸತ್ತು ಬಿದ್ದಿದೆ ನಿಮ್ಮದು ನೋಡಿಕೊಳ್ಳಿಇನ್ನೂಬ್ಬರ ತಟ್ಟೆಯ ಕತ್ತೆ ಸತ್ತು ಬಿದ್ದಿದೆ ಅದನ್ನು ನೀವು ನೋಡಿಕೊಳ್ಳಿ ನಮಗೆ ಹೇಳುತ್ತಿದ್ದಾರೆ ಜನತಾ ಪರಿವಾರದ ಸರಕಾರ ಅಧಿಕಾರಕ್ಕೆ ಬಂದಾಗ ಜನರ ಪರ ಕೆಲಸ ಮಾಡಿದ್ದಿವಿ,ಹೃದಯ ವೈಶ್ಯಾಲತೆ ಇರುವ ನಾಯಕ ಯಾರಾದರು ಇದ್ದರೆ ಅದು ಎಚ್ ಡಿ. ಕುಮಾರ ಸ್ವಾಮಿ ಮಾತ್ರ, ರಾಜ್ಯದ ಎಲ್ಲಾ ರೈತರ ಸಾಲ ಮನ್ನಾ ಮಾಡಿದ ಎಕೈಕ ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್ ಡಿ. ಕುಮಾರ ಸ್ವಾಮಿ ಎಂದು ಹೇಳಿದರು.

ನಂತರ ಎನ್,ಡಿ,ಎ,ಸಮನ್ವಯ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ ಮಾತನಾಡಿ, ನನಗೆ ಕೇಂದ್ರ ಮತ್ತು ರಾಜ್ಯದ ಮತ್ತು ಜಿಲ್ಲೆಯ ನಾಯಕರು ನನ್ನಗೆ ಒಂದು ಅವಕಾಶ ಮಾಡಿಕೊಟ್ಟಿದ್ದಾರೆ.ಅವರಿಗೆ ನನ್ನ ಅನಂತ ಧನ್ಯವಾದಗಳನ್ವು ತಿಳಿಸು ತ್ತೇನೆ ನಮ್ಮ ದೇಶದಲ್ಲಿ ಕಳೇದ10 ವರ್ಷದಲ್ಲಿ ಭಾರತ ದೇಶವನ್ನು ಬಲಿಷ್ಠ ದೇಶವನ್ವಾಗಿ ಮಾಡಿದ್ದಾರೆ ಇಡೀ ಪ್ರಪಂಚವೇ ನಮ್ಮ ದೇಶದ ಕಡೇ ತಿರುಗಿ ನೂಡುವಂತೆ ಮಾಡಿದ್ದಾರೆ ರಾಜಕೀಯದಲ್ಲಿ ನಾನು ಮೊದಲಲ್ಲ ನಮ್ಮ ತಂದೆಯವರು ಶಾಸಕರಾಗಿ ಹೈದ್ರಬಾದ್ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಸಂಸದರಾದ ಸಂಗಣ್ಣ ಕರಡಿಯವರು ರೈಲ್ವೆ, ಎನ್.ಎಚ್ ಹೈವೆ ಇನ್ನು ಹಲವಾರು ಯೋಜನೆಗಳ ಅಭಿವೃದ್ಧಿ ಮಾಡಿದ ಕಿತಿ೯ ಅವರಿಗೆ ಸಲ್ಲಬೇಕು ಅವರಂತ ನನ್ನಗೆ ಒಂದು ಅವಕಾಶ ಮಾಡಿ ಕೂಡಿ ನಮ್ಮ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಮಾಡಲು ನಾನು ಪ್ರಮಾಣಿಕ ಸೇವ ಮಾಡುತ್ತೇನೆ ಮತ್ತು ಎಲ್ಲರೂಂದಿಗೆ ಒಟ್ಟಿಗೆ ಉತ್ತಮ ಬಾಂಧವ್ಯದಿಂದ ಕೆಲಸ ಮಾಡುತ್ತೇವೆ ಕೇಂದ್ರ ಸರಕಾರದ ಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಭದ್ರ ಆಡಳಿತ ನೀಡುವ ಮೂಲಕ ದೇಶದ ಹಿತ ಕಾಪಾಡಿದ್ದಾರೆ ಹಲವಾರು ರೈತರ ಪರ ಯೋಜನೆಗಳನ್ನು ಜಾರಿಗೋಳಿಸಿದ್ದಾರೆ ರಾಷ್ಠ್ರ ಮತ್ತು ನಮ್ಮ ಕ್ಷೇತ್ರ ಅಭಿವೃದ್ದಿ ಯಾಗಬೇಕಾದರೆ ನನ್ನಗೆ ಹೆಚ್ಚಿನ ಮತಗಳನ್ನುನೀಡಿ ಬಹುಮತದಿಂದ ಆರಿಸಿ ತರಬೇಕೆಂದು ಹೇಳಿದರು ನಿಮ್ಮ ಆಶೀರ್ವಾದವೇ ನಮಗೆ ಶ್ರೀರಕ್ಷ ಎಂದರು.

ಕಾರ್ಯಕ್ರಮದಲ್ಲಿ ಮತಯಾಚನೆ ಕುರಿತು ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕ, ಸಿ.ವಿ.ಚಂದ್ರಶೇಖರ, ಕೆ.ಕರಿಯಪ್ಪ ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಕುಮಾರ ಗುಳಗಣ್ಣನವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ವೆಂಕಟರಾವ್ ನಾಡಗೌಡ್ರ ಮಾಜಿ ಸಚಿವರು, ಕೆ ವೀರುಪಾಕ್ಷಪ್ಪ ಮಾಜಿ ಸಂಸದರು, ಬಸವರಾಜ ದಡಗಸೂರ ಕನಕಗಿರಿ ಮಾಜಿ ಶಾಸಕರು, ಹೇಮಲತಾ ನಾಯಕ ವಿಧಾನಪರಿಷತ್ ಸದಸ್ಯರು, ಪರಣ್ಣ ಮುನ್ನವಳಿ ಗಂಗಾವತಿ ಮಾಜಿ ಶಾಸಕರು, ಮುಖಂಡ ಬಸಲಿಂಗಪ್ಪ ಭೋತೆ, ಮಾರುತಿ ಹೊಸಮನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ, ಚಂದ್ರಶೇಖರ ಪಾಟೀಲ್, ಬಿಜೆಪಿ ಲೋಕಸಭಾ ಸಂಚಾಲಕ ಗಿರಿಗೌಡ್ರ, ರಾಜು ಬಾಕಳೆ, ಈಶಪ್ಪ ಹಿರೇಮನಿ, ಡಾ.ಮಹೇಶ ಬೂನಕೊಪ್ಪ, ಶಕುಂತಲಾದೇವಿ ಮಾಲಿ ಪಾಟೀಲ್, ವಿರೇಶ ಮಾಹಂತಯ್ಯನಮಠ, ಗೌರವಾಧ್ಯಕ್ಷ ದ್ಯಾಮಣ್ಣ ಡೊಳ್ಳಿನ, ಜೆಡಿಎಸ್ ಪಕ್ಷದ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರ, ಶರಣಪ್ಪ ರಾಂಪೂರು, ಬಿಜೆಪಿ ಅಧ್ಯಕ್ಷ ಮಾರುತಿ ಗಾವರಾಳ, ಪ್ರಧಾನ ಕಾರ್ಯದರ್ಶಿ ಅಯ್ಯನಗೌಡ ಕೆಂಚಮ್ಮನವರು ,ಸಿ,ಹೆಚ್ ಪಾಟೀಲ್ ಜೆಡಿಎಸ್ ತಾಲೂ ಅಧ್ಯಕ್ಷ, ಬಸವರಾಜ ಗುಳಗುಳಿ, ವಿಶ್ವನಾಥ ಮರಿಬಸಪ್ಪನವರು, ಶಿವಲೀಲಾ ದಳವಾಯಿ ಬಸವನಗೌಡ ತೊಂಡಿಹಾಳ, ಶಂಕ್ರಪ್ಪ ಸುರಪುರ,,ಫಕೀರಪ್ಪ ತಳವಾರ ಜೆಡಿಎಸ್ ಪಕ್ಷದ ವಿವಿಧ ಮೊರ್ಚಾ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಇತರರು ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!