ತಾಲೂಕಿನ ಮುಧೋಳ ಗ್ರಾಮದ ಯುವ ಪತ್ರಕರ್ತ ಹುಸೇನಸಾಬ ಮೊತೇಖಾನಗೆ
ಬೆಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 21 – ಬೆಂಗಳೂರು ಎಸ್ ಎಸ್ ಕಲಾ ಸಂಗಮ ಸಂಸ್ಥೆಯವರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಲವು ವರ್ಷಗಳಿಂದ ಮಾಧ್ಯಮ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ಅನೇಕ ಸಂಘ ಸಂಸ್ಥೆಗಳಲ್ಲಿ ಸಮಾಜ ಸೇವೆ ಮಾಡುವುದನ್ನು ಗುರುತಿಸಿ ಬೆಂಗಳೂರು ಎಸ್ ಎಸ್ ಕಲಾ ಸಂಗಮ ಸಂಸ್ಥೆಯ ಸಂಸ್ಥಾಪಕರಾದ ಯುವ ಚಲನಚಿತ್ರ ನಟರು ಸ್ಟೈಲ್ ಬಿ.ಕೆ.ಶಿವಕುಮಾರ ಇವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 2023-24 ನೇ ಸಾಲಿನ ಅದ್ದೂರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಿರಿಯ ಕಲಾವಿದರಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ಎಸ್.ಎಸ್.ಕಲಾ ಸಂಗಮ ಸಂಸ್ಥೆ ವೀರಶೈವ ಲಿಂಗಾಯತ ಭವನ ಬಳ್ಳಾರಿ ರೋಡ್ ಸದಾಶಿವನಗರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದರು, ಯಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮದ ಯುವ ಪತ್ರಕರ್ತರಾದ ಹುಸೇನಸಾಬ ಮೊತೇಖಾನ ಅವರಿಗೆ ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಯಿತು. ಯುವ ರತ್ನ ಅಪ್ಪು ಗೀತಾ ಗಾಯನ, ರಸಮಂಜರಿ ಕಾರ್ಯ ಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಚಿಕ್ಕಪೇಟೆ ಕ್ಷೇತ್ರದ ಜನಪ್ರಿಯ ಶಾಸಕರಾದ ಆರ್ ವಿ ದೇವರಾಜ್ ಅವರ ಧರ್ಮಪತ್ನಿಯಾದ ಡಾ! ಆರ್ ವಿ ಮಮತಾ ದೇವರಾಜ್ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು, ಘನ ಉಪಸ್ಥಿತಿ ಅನಿತಾ ಥಾಮಸ್ ಡಾ! ವಿಜಯಲಕ್ಷ್ಮಿ, ರಾಧಿಕಾ ಆಚಾರಿ, ಹಂಸ ಹಾಗೂ ಚಲನಚಿತ್ರ ನಟಿ ಅನು ಹಾಸನ್ ಇವರ ಸಮ್ಮುಖದಲ್ಲಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು, ಹಲವಾರು ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಸಿದ್ದರು,
