05 Gvt01

ಕನಕರಾಯ ದೇವಸ್ಥಾನದ ಭ್ರಷ್ಟ ಸಿದ್ದಲಿಂಗಯ್ಯಸ್ವಾಮಿ ಅಮಾನತ್ತಿಗೆ ಒತ್ತಾಯ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 6- ಎರಡನೇಯ ತಿರುಪತಿ ಕನಕಗಿರಿಯ ಶ್ರೀ ಕನಕಚಲಪತಿ ದೇವಸ್ಥಾನದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿರುವ ಧಾರ್ಮಿಕ ದತ್ತಿ ಇಲಾಖೆ ಎಫ್‌ಡಿಸಿ ಸಿದ್ದಲಿಂಗಯ್ಯಸ್ವಾಮಿ ಸಂಪೂರ್ಣ ಅವ್ಯವಹಾರ ನಡೆಸುತ್ತಿದ್ದು, ತನಿಖೆಗೆ ಒಳಪಡಿಸಿ ಕೂಡಲೆ ಅಮಾನತ್ತುಗೊಳಿಸುವ ಮೂಲಕ ದೇವಸ್ಥಾನದ ಸಂಪನ್ಮೂಲ ರಕ್ಷಿಸಬೇಕೆಂದು ಕನಕಗಿರಿ ಶ್ರೀ ಲಕ್ಷ್ಮೀ ಭೂವರಾಹ ಸ್ವಾಮಿ ಸಂಸ್ಥೆಯ ಅಧ್ಯಕ್ಷ ದೊಡ್ಡಬಸಪ್ಪ ಚನ್ನಬಸಪ್ಪ ಬತ್ತದ ಒತ್ತಾಯಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಶ್ರೀ ಕನಕಚಲಪತಿ ದೇವಸ್ಥಾನವು ಎ ಗ್ರೇಡ್ ಹೊಂದಿದ್ದು, ಆಡಳಿತಾಧಿಕಾರಿಯನ್ನು ನೇಮಿಸಬೇಕಾದ ಸರಕಾರ ಕೇವಲ ಎಫ್‌ಡಿಸಿಯನ್ನು ನೇಮಕ ಮಾಡಿ ಕೈ ತೊಳೆದುಕೊಂಡಿದೆ. ಕಳೆದ ೯ ವರ್ಷಗಳಿಂದ ಇಲ್ಲಿ ನೆಲಯೂರಿರುವ ಸಿದ್ದಲಿಂಗಯ್ಯಸ್ವಾಮಿ ಸಂಪೂರ್ಣ ಅವ್ಯವಹಾರ ನಡೆಸುತ್ತಿದ್ದು, ದೇವಸ್ಥಾನಕ್ಕೆ ಭಕ್ತರು ಕೊಟ್ಟ ಧನ ಧಾನ್ಯ, ದನಕರು ಸೇರಿದಂತೆ ಇತ್ಯಾದಿ ವಸ್ತುಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಾರದೆ ಕಬಳಿಸುತ್ತಿದ್ದಾನೆ. ಸಾಕಷ್ಟು ಹಣಗಳಿಕೆ ಮಾಡುತ್ತಿದ್ದು, ಅನೇಕ ಕಡೆ ನಿವೇಶನ ಹಾಗು ಕೊಟ್ಯಾಂತರ ಬೆಲೆ ಬಾಳುವ ಮನೆಯನ್ನು ಸಹ ಲಿಂಗಸಗೂರು ತಾಲೂಕಿನ ಎರಡೋಣ ಗ್ರಾಮದಲ್ಲಿ ಕಟ್ಟಿದ್ದಾನೆ ಸಂಬAಧಪಟ್ಟ ಅಧಿಕಾರಿಗಳು ಕೂಡಲೆ ತನಿಖೆ ನಡೆಸಿ ಈತನನ್ನು ಅಮಾನತ್ತುಗೊಳಿಸಿ ದೇವಸ್ಥಾನದ ಸಂಪತ್ತು ರಕ್ಷಿಸಬೇಕೆಂದು ಬತ್ತದ ಅಗ್ರಹಿಸಿದರು.

ಮೀನುಗಾರರ ಸಂಘದ ಅಧ್ಯಕ್ಷ ಮರಿಯಪ್ಪ ನಾಯಕ ಮಾತನಾಡಿ, ಸುಮಾರು ೯ ವರ್ಷಗಳಿಂದ ಸ್ವಾಮಿ ಮಾಡಿರುವ ಅವ್ಯವಹಾರ ತನಿಖೆ ನಡೆಸಬೇಕು, ನಕಲಿ ರಸೀದಿ ಮೂಲಕ ಭಕ್ತರನ್ನು ಯಾಮಾರಿಸಿ ಹಣ ಸಂಗ್ರಹಿಸಿದ್ದಲ್ಲದೆ, ಪ್ರತಿಯೊಂದರಲ್ಲೂ ಪಾಲುದಾರನಾದ ಈತನು ದೇವಸ್ಥಾನದ ಕಾಮಗಾರಿಯಲ್ಲು ಮೂಗು ತೂರಿಸಿ ಅರೆಬರೆ ಕೆಲಸ ಮಾಡಿಸಿದ್ದು ಹಣ ಲೂಟಿ ಮಾಡಲಾಗಿದೆ, ದಾಸೋಹ ಭವನ ತೀರಾ ಕಳಪೆಯಾಗಿದ್ದು, ಮೂಲ ಸೌಕರ್ಯವೇ ಇಲ್ಲ, ಶುದ್ಧ ಕುಡಿಯುವ ನೀರಿಲ್ಲ, ಭಕ್ತರು ಉಳಿದುಕೊಂಡರೆ ಶುದ್ಧ ಶೌಚಾಲಯಗಳಿಲ್ಲ, ಪ್ರತಿದಿನ ಬ್ರಾಹ್ಮೀ ಮೊಹೋರ್ತದಲ್ಲಿ ದೇವಸ್ಥಾನದ ಪೂಜೆ ಮಾಡಬೇಕೆನ್ನುವ ನಿಯಮ ಗಾಳಿಗೆ ತೂರಲಾಗಿದೆ, ದೇವಸ್ಥಾನದ ಸುತ್ತಮುತ್ತಲಿನ ಜಾಗೆಯನ್ನು ಸಾರ್ವಜನಿಕರು ಕಬಳಿಸಿದ್ದು ಅದನ್ನು ರಕ್ಷಿಬೇಕು, ಸ್ಥಳಿಯ ತಹಶೀಲ್ದಾರ್ ಅಧ್ಯಕ್ಷರಾಗಿದ್ದು, ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳು, ಧಾರ್ಮಿಕ ದತ್ತಿ ಇಲಾಖೆ ಹಾಗು ಜಿಲ್ಲಾ ಉಸ್ತುವಾರಿ ಶಿವರಾಜ್ ತಂಗಡಗಿಯವರಿಗೂ ದೂರು ಸಲ್ಲಿಸಿದರು.

ಯಾವುದೇ ಕ್ರಮ ಕೈಗೊಂಡಿಲ್ಲ, ಕನಕಗಿರಿ ದೇವಸ್ಥಾನ ಅಭಿವೃದ್ದಿಗೊಂಡರೆ ಪ್ರವಾಸೋದ್ಯಮ ಉತ್ತೇಜನ ಸಿಕ್ಕಂತಾಗುತ್ತದೆ ಇದರಿಂದ ಆದಾಯ ಹೆಚ್ಚಿ ಬರಪ್ರದೇಶದ ಅಲ್ಲಿನ ಜನರಿಗೆ ಹೆಚ್ಚಿನ ಉದ್ಯೋಗ ಲಭಿಸಲಿದೆ ಅಧಿಕಾರಿಗಳ ತಾತ್ಸಾರ ನಮ್ಮಲ್ಲಿ ಆಕ್ರೋಶ ಹೆಚ್ಚಿಸಿದೆ ಎಂದ ಅವರು ಹೀಗೆ ಮುಂದುವರೆದರೆ ಒಂದು ವಾರದ ಗಡುವು ನೀಡಲಾಗುತ್ತಿದ್ದು, ನಂತರ ಕನಕಗಿರಿ ಗಂಗಾವತಿ ರಸ್ತೆ ತಡೆ ಮಾಡುವ ಮೂಲಕ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮುಕಂಡರಾದ ಪಾಮಣ್ಣ ಅರಳಿಗನೂರು, ಕೊಟ್ರೇಶ್ ಮಡಿವಾಳ ಇದ್ದರು.

Leave a Reply

Your email address will not be published. Required fields are marked *

error: Content is protected !!