
ನಾಟಕದಿಂದ ಸಾಮಾಜಿಕ ಬದಲಾವಣೆ
ಸಂಸದ ಸಂಗಣ್ಣ ಕರಡಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 18- ಸಾಮಾಜಿಕ ನಾಟಕಗಳು ಸಮಾಜ ತಿದ್ದುವ ಕೆಲಸ ಮಾಡುತ್ತದೆ. ನಾಟಕಗಳು ಗ್ರಾಮೀಣ ಮುಕ್ತ ವಿಶ್ವವಿದ್ಯಾಲಯ ಇದ್ದಂತೆ ಎಂದು ಸಂಸದ ಸಂಗಣ್ಣ ಕರಡಿ ಅಭಿಪ್ರಾಯ ಪಟ್ಟರು.
ಅವರು ಶನಿವಾರದಂದು ನಗರದ ಸಾಹಿತ್ಯಭವನದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ಕಿಹಳ್ಳಿಯ ನೇತಾಜಿ ಸುಭಾಸ್ ಚಂದ್ರ ಬೋಸ್ ಗ್ರಾಮೀಣಾಭಿವೃದ್ಧಿ ಸಾಂಸ್ಕೃತಿಕ, ಶಿಕ್ಷಣ, ಕ್ರೀಡಾ ಸಂಘ ಮತ್ತು ಕೂಕನಪಳ್ಳಿಯ ಶ್ರೀಬೆಟ್ಟದಲಿಂಗೇಶ್ವರ ತರುಣ ನಾಟ್ಯ ಸಂಘ ಆಶ್ರಯದಲ್ಲಿ ‘ಜನ ಮೆಚ್ಚಿದ ರಾಜಾಹುಲಿ’ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾಡಿನ ನಾಟಕಗಳ ಮೂಲಕ ಕಲೆ, ಸಾಹಿತ್ಯ ಉಳಿಯುತ್ತದೆ. ಕಲಾವಿದರು ಅಭಿನಯದ ಮೂಲಕ ಕಥಾನಾಯಕ, ಖಳನಾಯಕ ಹಾಸ್ಯ, ಉದ್ಯಮಿ ಸೇರಿ ಎಲ್ಲ ಪಾತ್ರಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡುತ್ತಿವೆ.
ಮನುಷ್ಯನನ್ನು ಬದಲಾವಣೆ ಮಾಡುತ್ತದೆ. ಕೂಕನಪಳ್ಳಿಯ ಸ್ವಗ್ರಾಮದ ತರುಣರು ಜಿಲ್ಲಾಕೇಂದ್ರದಲ್ಲಿ ನಾಟಕ ಪ್ರದರ್ಶನ ಮಾಡುತ್ತಿರುವುದು ಸಾಧನೆ. ಈ ನಿಟ್ಟಿನಲ್ಲಿ ಸಮಾಜದಲ್ಲಿನ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿಕೊಂಡು ಹೋಗಬೇಕು ಎಂದರು.
ವಿಶ್ವದಲ್ಲಿ ಭಾರತಕ್ಕೆ ದೊಡ್ಡ ಗೌರವ ನೀಡಬೇಕಾದರೆ ದೇಶದ ಇತಿಹಾಸ, ಸಂಗೀತ, ಕಲೆ, ನೃತ್ಯ, ಸಂಸ್ಕೃತಿಯು ಕಾರಣವಾಗಿದೆ. ಎಸ್.ಎಂ.ಖಾದ್ರಿ ನಮಗೆ ಕಲೆ ಯ ಆಸಕ್ತಿ ನೀಡಲು ಪ್ರೇರಣೆ ನೀಡಿದರು. ಸಂಗೀತ ಕೇಳುವುದರಿಂದ ಮತ್ತು ನಾಟಕ ನೋಡುವುದರಿಂದ ಮನಸ್ಸುಗೆ ಮುದ ನೀಡುತ್ತವೆ. ವಿಷ ಕಕ್ಕುವ ನಾಗರಹಾವು ಕೂಡಾ ಪುಂಗಿಯ ನಾದಕ್ಕೆ ತಕೆ ಆಡಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ದಿಶಾ ಸಮಿತಿ ಸದಸ್ಯ ಗಣೇಶ ಹೊರತಟ್ನಾಳ್ ಪ್ರಾಸ್ತಾವಿಕ ಮಾತನಾಡಿ, ಎಲ್ಲರೂ ನಾಟಕವನ್ನು ವೀಕ್ಷಿಸಬೇಕು. ಬಳಿಕ ನಾಟಕದಲ್ಲಿನ ಒಳ್ಳೆಯದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಉನ್ನತ ಗೌರವವನ್ನು ಬದುಕಬೇಕು ಎಂದು ಸಲಹೆ ನೀಡಿದರು.
ಹುಟ್ಟು ಹಬ್ಬ : ಕೇಕ್ ಕತ್ತರಿಸುವ ಮೂಲಕ ಸಂಸದ ಸಂಗಣ್ಣ ಕರಡಿಯವರು ೭೩ನೇ ಜನ್ಮದಿನವನ್ನು ಈ ಸಂದರ್ಭದಲ್ಲಿ ಆಚರಿಸಿದರು.
ವೇದಿಕೆ ಮೇಲೆ ಮಹಾಂತೇಶ ಸಂಗಟಿ, ಜಿ.ಎಂ.ಶಿವಪುರ, ಕಾವೇರಿ ರಾಗಿ, ಪರಶುರಾಮ್ ಕೆರಳ್ಳಿ, ಯಲ್ಲಪ್ಪ ಹಿರೇಮನಿ, ಯಮನೂರಪ್ಪ ದನಕನದಡ್ಡಿ, ಪತ್ರಕರ್ತರಾದ ಎಂ.ಸಾದಿಕ್ ಅಲಿ, ಎಚ್.ಎಸ್.ಹರೀಶ್, ಹನುಮಂತ ಹಳ್ಳಿಕೇರಿ ಇದ್ದರು.