ಶ್ರೀಮೇಧ ಕಾಲೇಜಿನಲ್ಲಿ ನೂತನ ಸಾಂಸ್ಕೃತಿಕ ಕೊರ್ಸ್ ಪ್ರಾರಂಭ : ರಾಮ್ ಕಿರಣ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 30- ನಗರದಲ್ಲಿ ಪ್ರತಿಷ್ಠಾತ್ಮಕವಾದಂತ ವಿದ್ಯೆ ಸಂಸ್ಥೆಗಳಲ್ಲಿ ಒಂದಾದ ಶ್ರೀಮೇಧ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಿಂದ, ಮ್ಯೂಸಿಕ್ ಅಂಡ್ ಪರ್ಫಾರ್ಮಿಂಗ್ ಆರ್ಟ್ಸ್ ಎಂಬುವ ನೂತನ ಕೋರ್ಸ್ ಪ್ರಾರಂಭಿಸುತ್ತಿರುವದಾಗಿ, ಶ್ರೀಮೇಧಾ ವಿದ್ಯಾ ಸಂಸ್ಥೆಗಳ ಪ್ರಾಚಾರ್ಯ ಡಾ.ರಾಮ್ ಕಿರಣ್.ಕೆ ಹೇಳಿದರು.
ಸಾಂಸ್ಕೃತಿಕ, ಕಲಾ ಕ್ಷೇತ್ರವನ್ನು ಉಳಿಸುವುದರ ಜೊತೆಗೆ, ಮುಂದಿನ ಪೀಳಿಗೆಗೆ ಅನುಕೂಲಕ್ಕಾಗಿ ಕಳೆಗಳ ಸಂರಕ್ಷಣಾ ಅವಶ್ಯಕತೆ ಇದೆ ಎಂದರು.
ಪ್ರದರ್ಶಿಕ ಕಲಾ, ಸಂಗೀತ, ನೃತ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ವೀಣವಾದನೆ, ಭರತನಾಟ್ಯ, ಕುಚುಪುಡಿ ತರಹ ಸರ್ಟಿಫಿಕೇಟ್ ಕೋರ್ಸ್ಗಳನ್ನು ತಮ್ಮ ವಿದ್ಯಾ ಸಂಸ್ಥೆಯಲ್ಲಿ ಪ್ರಾರಂಭಿಸುತ್ತಿರುವದಾಗಿ ತಿಳಿಸಿದರು.
ಕರ್ನಾಟಕ ರಾಜ್ಯದ ಗಂಗೂಬಾಯ್ ಹಾನಗಲ್ ಯುನಿವರ್ಸಿಟಿ, ಅನುಮೋದನೆ ಮೇರೆಗೆ ಈ ಕೋರ್ಸ್ಗಳನ್ನು ಪ್ರಾರಂಭಿಸುತ್ತಿರುವದಾಗಿ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಮನೋಭಾವ ಬೆಳೆಸಲು ಈ ಕೋರ್ಸ್ಗಳು ಉಪಯೋಗ ಪಡುತ್ತವೆ ಎಂದು ತಿಳಿಸಿದರು.
ಇಂದಿನ ಕಾಲಮಾನದಲ್ಲಿ ಈ ಕೋರ್ಸ್ಗಳಿಗೆ ಅತಿ ಕಡಿಮೆ ಬೇಡಿಕೆ ಇದ್ದರೂ ಸಹಿತ ತಮಗೆ ಸಂಗೀತ ಸಾಹಿತ್ಯದ ಮೇಲೆ ಇರುವ ಆಸಕ್ತಿಯಿಂದ, ನಾಮಿನಲ್ ಫೀಜಿನಲ್ಲಿ ಈ ಕೋರ್ಸ್ಗಳಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಹೆಚ್ಚಿನ ಸಮಾಚಾರವನ್ನು ತಮ್ಮ ಕಾಲೇಜಿನ ಕಚೇರಿಯಲ್ಲಿ ಆಸಕ್ತರು ಪಡಿಯಬಹುದು ಎಂದು ಈ ಸಂದರ್ಭದಲ್ಲಿ ವಿವರಿಸಿದರು.