ಶಾಸಕ ರಾಯರೆಡ್ಡಿ ಬಗ್ಗೆ ಹಗುರವಾಗಿ ಮಾತನಾಡುವದು ಸರಿಯಲ್ಲಾ : ಡಾ.ಶಿವನಗೌಡ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 24- ಪಟ್ಟಣದ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಶಿವಶರಣಪ್ಪಗೌಡ್ರು ಪಾಟೀಲ ಅವರು ಹಾಲಿ ಶಾಸಕ ಬಸವರಾಜ ರಾಯರೆಡ್ಡಿ ಅವರ ಬಗ್ಗೆ ಮತ್ತು ಕುಟುಂಬದ ಸಹೋದರರ ವಿರುದ್ಧ ಇಲ್ಲಸಲ್ಲದ ಅರೋಪ ಮಾಡುವದು ಅವರ ಬಗ್ಗೆ ಹಗುರವಾಗಿ ಮಾತನಾಡುವದು ಸರಿ ಅಲ್ಲಾ ಇದು ಮಾಜಿ ಶಾಸಕ ಶಿವಶರಣಪ್ಪಗೌಡ್ಕ ಪುತ್ರ ವ್ಯಾಮೋಹ ಎತ್ತಿ ತೋರಿಸುತ್ತದೆ ಅವರ ಆರೋಪದಲ್ಲಿ ಯಾವುದೇ ಉರುಳಿಲ್ಲಾ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಡಾ.ಶಿವನಗೌಡ ದಾಮರಡ್ಡಿ ಹೇಳಿದರು.

ಪಟ್ಟಣದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪತ್ರಿಕರೂಂದಿಗೆ ಮಾತನಾಡಿದ ಅವರು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದಗೌಡ ಪಾಟೀಲ ಅವರು ವಜ್ರಬಂಡಿಯಲ್ಲಿರುವ ಶ್ರೇಯಾ ಸ್ಟೋನ್ ಕ್ರಶೆರ್ ಕಾನೂನು ಉಲ್ಲಂಘನೆಸಿದೆ ಎಂದು ಅವರದೇ ಪಕ್ಷದ ಮತ್ತು ಜೆಡಿಎಸ್ ಪಕ್ಷದ ಕೆಲವರು ಪ್ರತಿಭಟನೆ ನಡೆಸಿದ್ದರು.

ಆ ಕಂಪನಿಯಲ್ಲಿ ಅತಿಯಾದ ಕಲ್ಲು ಸ್ಪೋಟಕ ಬಳಿಕೆ ಮಾಡಿ ಕಲ್ಲು ಸ್ಪೋಟಸಿದ್ದರಿಂದ ಪಕ್ಕದಲ್ಲಿರುವ ಮನೆಯ ಮೇಲೆ ಕಲ್ಲು ಬಿದ್ದು ಮನೆ ಜಕ್ಕಾಂ ಆಗಿದೆ ಆದರೆ ಅದ್ರುಷ್ಟವಶ ಯಾವುದೇ ಪ್ರಾಣಹಾನಿ ಸಂಭವಿಸಿರುವದಿಲ್ಲಾ ಮನೆಯಲ್ಲಿ ವಿದ್ಯಾರ್ಥಿನಿ ಹೊರಗಡೆ ಹೋದಾಗ ದೊಡ್ಡ ದುರಂತ ತಪ್ಪಿದೆ. ಇದರಿಂದ ಹಲವಾರು ಸಂಘಟನೆಗಳು ಮತ್ತು ಜೆಡಿಎಸ್ ಪಕ್ಷದವರು ಮನಲಿ ಸಲಿಸಿದ್ದಾರೆ ಇದರಿಂದ ಅಧಿಕಾರಿಗಳು ಕಾನೂನು ಪ್ರಕಾರ ತನಿಖೆ ನಡೆಸುತ್ತಿದ್ದಾರೆ ಅದರಲ್ಲಿ ಕಾಂಗ್ರೆಸ್ ಪಕ್ಷ ಅಥವಾ ಶಾಸಕರ ಯಾವ ಕೈವಾಡ ಇರುವದಿಲ್ಲಾ ಎಂದರು.

ಮಾಜಿ ಶಾಸಕ ಶಿವಶರಣಪ್ಪಗೌಡ್ಕ ಪಾಟೀಲ ಅವರು ಹೇಳುವದು ನಮ್ಮ ಸುಪುತ್ರ ಅರವಿಂದಗೌಡ ಪಾಟೀಲ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆಗಿದ್ದಾರೆ ಅವರ ಏಳ್ಳಿಗೆ ಸಹಿಸದೆ ರಾಯರೆಡ್ಡಿ ಅವರು ರಾಜಕೀಯವಾಗಿ ಮೊಳಕೆಯಲ್ಲಿ ಚಿವುಟ ಬೆಕಂದು ಹೇಳುವದು ಇದು ಶುದ್ಧ ಸುಳ್ಳು ಸತ್ಯಕ್ಕೆ ಹತ್ತಿರವಿಲ್ಲ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ರಾಯರೆಡ್ಡಿ ಅವರ ಅಭಿವೃದ್ಧಿ ಸಹಿಸದೇ ಈ ರೀತಿ ಮಾತನಾಡುವದು ಸರಿಯಲ್ಲ ಬಸವರಾಜ ರಾಯರೆಡ್ಡಿ ಅವರು ಯಾವತ್ತು ಕುಟುಂಬ ರಾಜಕಾರಣ ಮಾಡುವದಿಲ್ಲ ಅವರು ಕ್ಷೇತ್ರದಲ್ಲಿ ಅಭಿವೃದ್ಧಿ ಪರ ಚಿಂತನೆ ಮತ್ತು ಸಮಗ್ರ ಅಭಿವೃದ್ಧಿಯೇ ಅವರ ಗುರಿಯಾಗಿದೆ ಎಂದು ಡಾ.ದಾನರಡ್ಡಿ ಹೇಳಿದರು.

ಯುವ ಮುಖಂಡ ಮಾಂಹತೇಶ ಗಾಣಗೇರ, ಹಂಪಯ್ಯಸ್ವಾಮ್ಮಿ ಹಿರೇಮಠ ಮಾತನಾಡಿ, ಶಾಸಕ ಬಸವರಾಜ ರಾಯರೆಡ್ಡಿ ಅವರು ಯಾರ ವಿರುದ್ಧ ಧ್ವಷ ರಾಜಕಾರಣ ಮಾಡುವರಲ್ಲಾ ಮಾಜಿ ಶಾಸಕ ಶಿವಶರಣಪ್ಪಗೌಡ್ಕ ತಮ್ಮ ಘನತೆ ಗೌರವಕ್ಕೆ ತಕ್ಕಂತೆ ಮಾತನಾಡುವದು ಕಲಿಯಬೇಕು ಅವರ ಮಗನ ರಾಜಕೀಯ ಏಳಿಗೆ ಸಹಿಸಲಾರದೆ ಈ ತರಹ ಮಾಡಿದ್ದಾರೆ ಎನ್ನುವ ಮಾತು ಎಷ್ಟು ಸರಿ. ಅವರನ್ನು ಮುಂದೆ ಬರಲು ತಡೆಯಲು ಅವರು ನಮ್ಮ ಪಕ್ಷದಲ್ಲಿ ಇಲ್ಲಾ ಅದಕ್ಕೂ ನಮ್ಮ ಶಾಸಕರಿಗೂ ಸಂಭದವಿಲ್ಲಾ ಹಾಗೂ ರಾಯರೆಡ್ಡಿ ಅವರ ಸಹೋದರರು ಯಾರ ಮೇಲೆ ದೌರ್ಜನ್ಯ ಮಾಡಿರುವುದು ಉದಾಹರಣೆಗಳು ಇಲ್ಲಾ ವಜ್ರಬಂಡಿಯಲ್ಲಿ ಅನ್ಯಾಯಕೂಳ್ಳಗಾದ ಕುಟುಂಬದ ಪರವಾಗಿ ನಿಂತು ದೊಡ್ಡ. ವ್ಯಕ್ತಿಯಾಗಬೇಕು ಅದನ್ನು ಬಿಟ್ಟು ತಮ್ಮ ಸುಪುತ್ರನ ಅತಿಯಾದ ವ್ಯಾಮೋಹದಿಂದ ಮಾತನಾಡುವದು ಬಿಡಬೇಕು ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಕಾಂಗ್ರೆಸ್ ಪಕ್ಷದ ವಕ್ತಾರ ಡಾ.ಶಿವನಗೌಡ ದಾನರಡ್ಡಿ, ಸಂಗಮೇಶ ಗುತ್ತಿ, ಶರಣಪ್ಪ ಗಾಂಜಿ, ರೇವಣಪ್ಪ ಸಂಗಟಿ, ಮಾಂಹತೇಶ ಗಾಣಗೇರ, ಎಂ.ಎಫ್.ನಧಾಫ್, ಮಾನಪ್ಪ ಪೂಜಾರ, ಹಂಪಯ್ಯ ಸ್ವಾಮ್ಮಿ ಹಿರೇಮಠ ಮತ್ತು ಕಾರ್ಯಕರ್ತರು ಹಾಗೂ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!