ಸಾಮೂಹಿಕ ವಿವಾಹಗಳಿಂದ ಕುಟುಂಬದ ಆರ್ಥಿಕ ಹೊರೆಯನ್ನು ತಪ್ಪಿಸಬಹುದು : ಮುನಿಸ್ವಾಮಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 24- ಬಡವರು ಮದುವೆ ಮತ್ತು ಇತರೆ ಕೌಟುಂಬಿಕ ಕಾರ್ಯಕ್ರಮಗಳಿಗೆ ಲಕ್ಷಾಂತರ ರೂಪಾಯಿ ಸಾಲವನ್ನು ಮಾಡಿ ಸಾಲದ ಹೊರೆಯಿಂದ ಇದ್ದಬದ್ದ ಸಣ್ಣಪುಟ್ಟ ಆಸ್ತಿಗಳನ್ನು ಮಾರಿಕೊಂಡು ಬೀದಿಗೆ ಬಿದ್ದ ಉದಾಹರಣೆ ನಮ್ಮ ಮುಂದೆ ಇದೆ, ಇಂತಹ ಸಂಕಷ್ಟವನ್ನು ಬಡ ಕುಟುಂಬಗಳು ಅನುಭವಿಸಬಾರದು ಎಂಬ ದೃಷ್ಟಿಯಿಂದ ನಮ್ಮ ಕನ್ನಡ ರಕ್ಷಣಾ ಯುವ ವೇದಿಕೆವತಿಯಿಂದ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡು ಇಂದು ನೆರವೇರಿಸಲಾಯಿತು ಎಂದು ಕರವೇ ಯುವ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸಿ ಮುನಿಸ್ವಾಮಿ ತಿಳಿಸಿದರು.

ನಗರದ ಕಪ್ಪಗಲ್ಲು ರಸ್ತೆಯಲ್ಲಿನ ಅಮರೇಶ್ವರ ದೇವಸ್ಥಾನದಲ್ಲಿ ವೇದಿಕೆಯ ವತಿಯಿಂದ ಹಮ್ಮಿಕೊಳ್ಳಲಾದ ೧೯ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನೆರವೇರಿಸಿ ನವಜೋಡಿಗಳಿಗೆ ಶುಭ ಹಾರೈಸಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಸಹ ಸತತವಾಗಿ ೧೯ನೇ ವರ್ಷದ ಉಚಿತ ಸಮೂಹಿಕ ವಿವಾಹಗಳನ್ನು ಇಂದು ಯಶಸ್ವಿಯಾಗಿ ನಡೆಸಿದ್ದರು.

ಈ ವಿವಾಹ ಕಾರ್ಯಕ್ರಮದಲ್ಲಿ ಒಂಬತ್ತು ನವ ಜೋಡಿಗಳು ಹೊಸ ಬಾಳಿಗೆ ಕಾಲಿಟ್ಟರು. ಈ ನವ ಜೋಡಿಗಳಿಗೆ ಸೀರೆ, ಪಂಚೆ, ತಾಳಿ, ಕಾಲುಂಗುರ ಮತ್ತು ಇತರೆ ಮದುವೆಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಿ ಅವರಿಗೆ ಮತ್ತು ಅವರ ಸಂಬAಧಿಕರಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು ಎಂದು ಅವರು ತಿಳಿಸಿದರು.

ಬಡ ಜನರ ಅನೂಕೂಲಕ್ಕಾಗಿ ಈ ಉಚಿತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಶುಭ ಕಾರ್ಯದಲ್ಲಿ ಸಿರಿವಾರ, ಕಪ್ಪಗಲ್ಲು, ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು ಹಾಗೂ ತಾಲೂಕು ಪಂಚಾಯಿತಿಯ ಸದಸ್ಯರುಗಳು ಎಲ್ಲಾ ಗ್ರಾಮಗಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರುಗಳು ಸರ್ವಸದ್ಯರುಗಳು ಹಾಗೂ ಎಲ್ಲಾ ಗ್ರಾಮಗಳು ಹಿರಿಯ ಮುಖಂಡರು, ರೈತ ಬಾಂಧವರು, ಸಮಸ್ತ ನಾಗರಿಕರು, ಎಲ್ಲಾ ಕನ್ನಡ ಪರ ಸಂಘ, ಸಂಸ್ಥೆಗಳು ಪದಾಧಿಕಾರಿಗಳು ಭಾಗವಹಿಸಿ ನವ ಜೋಡಿಗಳಿಗೆ ಶುಭ ಹಾರೈಸಿದರು ಎಂದು ಕನ್ನಡ ರಕ್ಷಣಾ ಯುವ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸಿ ಮುನಿಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕನ್ನಡ ರಕ್ಷಣಾ ಯುವ ವೇದಿಕೆ, ಜಿಲ್ಲಾ ಘಟಕ ಅಧ್ಯಕ್ಷ ಕಪ್ಪಗಲ್ಲು ಸಿ.ಶಿವಶಂಕರರೆಡ್ಡಿ (ಶಂಕರ್), ಜಿಲ್ಲಾ ಪ್ರಧಾನಕಾರ್ಯದರ್ಶಿಬಳ್ಳಾರಿ, ಕಪ್ಪಗಲ್ಲು ಪರಶುರಾಮ ಬಿಸಿಲಹಳ್ಳಿ, ಉಚಿತ ಸಾಮೂಹಿಕ ವಿವಾಹಗಳ ಉಸ್ತುವಾರಿಯನ್ನು ವಹಿಸಿಕೊಂಡು ಎಲ್ಲಾ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸಿಕೊಟ್ಟರು ಎಂದು ಮುನಿಸ್ವಾಮಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!