ಪಾದಯಾತ್ರಿ ಹನುಮೇಶ್ ಕುಲಕರ್ಣಿಗೆ ಗೆಳೆಯರಿಂದ ಸನ್ಮಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 8- ಕೊಪ್ಪಳದಿಂದ ಉತ್ತರಾಖಂಡದ ಬದರಿನಾಥವರೆಗೆ ಸುಮಾರು ೨೫೦೦ ಕಿ.ಮೀ. ಯಶಸ್ವಿ ಪಾದಯಾತ್ರೆ ಪೂರೈಸಿದ ಹನುಮೇಶ್ ಕುಲಕರ್ಣಿ ಅವರಿಗೆ ಕಾಲೇಜು ಸಹಪಾಠಿಗಳು ಸನ್ಮಾನಿಸಿ ಗೌರವಿಸಿದರು.
ಭಾಗ್ಯನಗರದ ನ್ಯಾಷನಲ್ ಪದವಿಪೂರ್ವ ಕಾಲೇಜು ಆವರಣದಲ್ಲಿ ರವಿವಾರ ಕೊಪ್ಪಳದ ಶ್ರೀಗವಿಸಿದ್ಧೇಶ್ವರ ಕಾಲೇಜಿನ ೨೦೦೨ನೇ ಸಾಲಿನ ಬಿಎ ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಹಪಾಠಿಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕೊಪ್ಪಳದ ರಾಘವೇಂದ್ರ ಸ್ವಾಮಿಗಳ ಮಠ ಹಾಗೂ ಪಾಂಡುರAಗ ದೇವಸ್ಥಾನದ ವಾರಕರಿ ಪರಂಪರೆ, ಅಭಂಗಗಳ ಅಧ್ಯಯನದಿಂದ ನನ್ನ ಬದುಕಿನಲ್ಲಿ ಪರಿಶುದ್ಧತೆ ಕಾಪಾಡಿಕೊಳ್ಳಲು ಸಾಧ್ಯವಾಗಿದೆ.
ಸುದೀರ್ಘವಾದ ಈ ಆಧ್ಯಾತ್ಮಿಕ ನಡಿಗೆಯು ನನಗೆ ಅನೇಕ ಅನುಭವಗಳನ್ನು ತಂದುಕೊಟ್ಟಿವೆ. ದೇಶದ ಹಲವಾರು ಸಂಸ್ಕೃತಿ, ಭಾಷೆಗಳ ಜನ ತೋರಿದ ಪ್ರೀತಿ, ನೀಡಿದ ಆತಿಥ್ಯ ಸ್ಮರಣೀಯವಾಗಿವೆ. ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ಮೂಲಕ ಸಾಗಿದ ಈ ಯಾತ್ರೆಯುದ್ದಕ್ಕೂ ನಿಸರ್ಗ ಅನೇಕ ಪಾಠಗಳನ್ನು ಕಲಿಸಿದೆ.ಪ್ರಕೃತಿಯ ಶಕ್ತಿಗೆ ಸೋಜಿಗಗೊಂಡಿದ್ದೇನೆ. ನಮ್ಮ ನಿತ್ಯದ ಬದುಕಿನ ಧಾವಂತದಲ್ಲಿಯೂ ಲೋಕದ ಒಳಿತಿಗಾಗಿ ನಾವು ನಮ್ಮ ಕೈಲಾದಷ್ಟು ಸೇವೆ ಮಾಡಬೇಕು. ಯಾತ್ರೆಗಳು ನಮ್ಮಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸುತ್ತವೆ, ಶಕ್ತಿ, ಸಾಮರ್ಥ್ಯ ಇರುವವರೆಲ್ಲರೂ ಕನಿಷ್ಠ ತಮ್ಮ ಇಷ್ಟದ ಅಥವಾ ಕುಲದೇವರ ದೇವಾಲಯಗಳಿಗೆ ಪಾದಯಾತ್ರೆ ಮಾಡಿ ಅದರ ಅಪೂರ್ವ ಅನುಭವ ಪಡೆಯಬೇಕು ಎಂದರು.
ಭಾರತದ ಅಂತರಾಷ್ಟ್ರೀಯ ಸಂಬಂಧಗಳ ಕುರಿತು ಮಹಾಪ್ರಬಂಧ ಮಂಡಿಸಿ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಿಂದ ಪಿಹೆಚ್‌ಡಿ ಪದವಿ ಪಡೆದಿರುವ ಲಕಮಾಪುರದ ಡಾ.ಉಮೇಶ್ ಅಂಗಡಿಯವರನ್ನು ಇದೇ ಸಂದರ್ಭದಲ್ಲಿ ಸಹಪಾಠಿಗಳು ಸನ್ಮಾನಿಸಿದರು.
ಪ್ರಕಾಶಗೌಡ ಎಸ್.ಯು, ಮಂಜುನಾಥ ಡೊಳ್ಳಿನ, ರಮೇಶ್ ಬುಡ್ಡನಗೌಡ್ರ ಮತ್ತಿತರರು ಮಾತನಾಡಿದರು ರೇಣುಕರಾಜ ನಿರೂಪಿಸಿದರು.
ರವಿಕುಮಾರ ಬೆಟಗೇರಿ, ಗುರು ಅಗಳಿ, ಕಾಲೇಶಕುಮಾರ ಲಕಮಾಪುರ, ಲಕ್ಷ್ಮಣ ಸಾಲ್ಮನಿ, ಮಂಜುನಾಥ ಉಮಚಗಿ, ಸಜ್ಜಾದ ಹುಸೇನ್, ವೆಂಕಟೇಶ ಗೋಸಿ, ಬಸವರಾಜ ಕರುಗಲ್, ವಿಶ್ವನಾಥರೆಡ್ಡಿ ಬನ್ನಿಗೋಳ, ಶರಣು ತಿಳಿಗೋಳ, ಶ್ರೀಶೈಲ ಬಡಿಗೇರ, ರಾಘವೇಂದ್ರ ಕುಷ್ಟಗಿ, ಮಂಜುನಾಥ ಆರೆಂಟನೂರ, ಪ್ರವೀಣ ಅಕ್ಕಿ, ದ್ಯಾಮಣ್ಣ ಡೊಳ್ಳಿನ, ದುರಗೋಜಿ ಜಾಧವ್, ಗುರುಬಸವರಾಜ ರೊಟ್ಟಿ, ಬಸವರಾಜ ಅಳ್ಳೊಳ್ಳಿ, ಹನುಮಂತ ಭೈರನಾಯಕನಹಳ್ಳಿ, ಗಿರೀಶ ಪಾನಘಂಟಿ, ನತಸಿಂಹರಾವ್ ಕುಲಕರ್ಣಿ, ಕುಬೇರ ನರಗುಂದ ಮತ್ತಿತರ ಸಹಪಾಠಿಗಳು ಮತ್ತಿತರರು ಇದ್ದರು.