ನ 30ಕ್ಕೆ ಯಲಬುರ್ಗಾ ಪಟ್ಟಣಕ್ಕೆ ಕರ್ನಾಟಕ ಸಂಭ್ರಮ-50 ರಥಯಾತ್ರೆ
ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲು ವಿವಿಧ ಅಧಿಕಾರಿಗಳಿಗೆ ತಹಶೀಲ್ದಾರ ಕರೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ ,23 – ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ, ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ ಸಂಸ್ಕೃತಿ ಹಾಗೂ ನಾಡು ನುಡಿ ಬಿಂಬಿಸುವ ಹಾಗೂ ಯುವ ಸಮುದಾಯದಲ್ಲಿ ಕನ್ನಡ ಕನ್ನಡಿಗ ಕರ್ನಾಟಕದ ಅರಿವು ಮೂಡಿಸುವ ರಥಯಾತ್ರೆ ರಾಜ್ಯಾದಾದ್ಯಂತ ಸಂಚರಿಸುತ್ತಿದೆ.
ಇದೇ ನವೆಂಬರ್ 30ರಂದು ಯಲಬುರ್ಗಾ ತಾಲೂಕಿಗೆ ಆಗಮಿಸಲಿದ್ದು, ಈ ಆದ್ದೂರಿ ಸ್ವಾಗತಕ್ಕೆ ತಾಲೂಕ ಆಡಳಿತ ಸಜ್ಜಾಗಿದೆ. ಕರ್ನಾಟಕ ಸಂಭ್ರಮ-50ರ ರಥಯಾತ್ರೆಯು ತಾಲೂಕಿನಲ್ಲಿ ನ,30 ರಂದು ತಾಲೂಕಿನ ಸಂಗನಾಳ ಗ್ರಾಮದಿಂದ ಆಗಮಿಸಿ ಪಟ್ಟಣದಲ್ಲಿ ಸಂಚರಿಸಲಿದ್ದು, ಈ ಸುವರ್ಣ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಹಶಿಲ್ದಾರ ಬಸವರಾಜ ತೆನ್ನಳ್ಳಿ ಹೇಳಿದರು ತಹಶಿಲ್ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ಸಂಭ್ರಮ-50ರ ರಥಯಾತ್ರೆ ಸಂಚಾರ ಕುರಿತಂತೆ ಕನ್ನಡಪರ ಸಂಘಟನೆಗಳು ಹಾಗೂ ತಾಲೂಕ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು ರಾಜ್ಯ ಸರ್ಕಾರವು ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವವನ್ನು ವರ್ಷವಿಡೀ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದು, ತಾಲೂಕು ಮಟ್ಟದಲ್ಲಿ ರಥಯಾತ್ರೆಯ ಅದ್ದೂರಿ ಸ್ವಾಗತಕ್ಕೆ ಪೂರ್ವತಯಾರಿ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು, ನವಬಂರ್ 30 ರಂದು ಸಂಗನಾಳ ಗ್ರಾಮಕ್ಕೆ ಆಗಮಿಸಲಿದೆ.
ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸ ಬೇಕಾಗಿದೆ ಎಂದು ಹೇಳಿದರು.ಕರ್ನಾಟಕ ಸಂಭ್ರಮ-50ರ ರಥಯಾತ್ರೆ ಸಂಚಾರ ಅಂಗವಾಗಿ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೋಳ್ಳಬೆಕೆಂದು ತಹಶಿಲ್ದಾರ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ನಿಂಗಪ್ಪ.ರವರಿಗೆ ಸೂಚಿಸಿದರ ರಥಯಾತ್ರೆಯು ಸಂಗನಾಳ ಗ್ರಾಮದಿಂದ ಪ್ರಾರಂಭಗೊಂಡು, ಕರಮುಡಿ, ಮುಧೋಳ. ಮಾರ್ಗವಾಗಿ ಯಲಬುರ್ಗಾ ಪಟ್ಟಣದ ಮೋಗ್ಗಿ ಬಸವೇಶ್ವರ ದೇವಸ್ಥಾನದಿಂದ ಬಯಲು ರಂಗಮಂದಿರದ ವರಗೆ ಈ ರಥಯಾತ್ರೆ ಆಗಮಿಸಲಿದೆ ನಂತರ ರಂಗಮಂದಿರದಲ್ಲಿ ಕಲಾವಿದರಿಂದ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಲಿವೆ. ಡಿಸೆಂಬರ 1 ರಂದು. ಚಿಕ್ಕಮ್ಯಾಗೇರಿ. ವಣಗೇರಿ ಬೇವೂರು ಗುನ್ನಾಳ ಮಾರ್ಗವಾಗಿ ಹಿರೇವಂಕಲಕುಂಟಾ ಗ್ರಾಮಕ್ಕೆ ರಥಯಾತ್ರೆ ತೆರಳಿ ವಸ್ತಿ ಮಾಡಲಾಗುವದು ಡಿ,2 ರಂದು ವಜ್ರಬಂಡಿ, ಬಂಡಿ ಮಾರ್ಗವಾಗಿ ಕುಷ್ಠಗಿ ಪಟ್ಟಣಕ್ಕೆ ರಥಯಾತ್ರೆಗೆ ಬಿಳ್ಕೋಡಲಾಗುವದೆಂದು ತಹಶಿಲ್ದಾರ ಬಸವರಾಜ ತೆನ್ನಳ್ಳಿ ಹೇಳಿದರು.
ಪೂರ್ವಭಾವಿ ಸಭಯಲ್ಲಿ ಯಲಬುರ್ಗಾ ತಹಶಿಲ್ದಾರ , ಬಸವರಾಜ ತೆನ್ನಳ್ಳಿ, ಕುಕನೂರ ತಹಶಿಲ್ದಾರ,ಪ್ರಾಣೇಶ .ಪಟ್ಟಣ ಪಂಚಾಯತಿ ಸದಸ್ಯರುಗಳಾದ ಅಂದಯ್ಯ ಕಳ್ಳಿಮಠ, ಹನಮಂತಪ್ಪ ಭಜಂತ್ರಿ, ಮುಖಂಡರುಗಳಾದ ವೀರಣ್ಣ ಹುಬ್ಬಳ್ಳಿ. ಕರ್ನಾಟಕ ರಕ್ಷಣಾ ವೇದೀಕೆ ಶಿವರಾಮೇಗೌಡ ಬಣದ ಜಿಲ್ಲಾ ಕಾರ್ಯಾಧ್ಯಕ್ಷ, ರಾಜಶೇಖರ ಹೋಸಳ್ಳಿ, ಕರವೆ ಪ್ರವೀಣ ಶೆಟ್ಟಿ ಬಣದ ತಾಲೂಕ ಅಧ್ಯಕ್ಷ ಶಿವಕುಮಾರ ನಾಗನಗೌಡ್ರ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಬಿ,ನಾಗೇಶ ಗ್ರೇಡ್ 2,ತಹಶಿಲ್ದಾರ ನಾಗಪ್ಪ ಸಜ್ಜನ್,ಶಿರಸ್ತೇದಾರ,ದೇವರಡ್ಡಿ ನೌಕರ ಸಂಘದ ತಾಲೂಕ ಅಧ್ಯಕ್ಷ ವಾಯ್,ಜಿ,ಪಾಟೀಲ್, ಸಾರಿಗೆ ಘಟಕ ವ್ಯವಸ್ಥಾಪಕ ರಮೇಶ ಚಿಣಗಿ, ಸಮಾಜಕಲ್ಯಾಣ ಇಲಾಖೆಯ ಶಶಿಧರ ಸಕ್ರಿ, ತೋಟಗಾರಿಕೆ ಇಲಾಖೆಯ ನಿಂಗನಗೌಡ ಪಾಟೀಲ್, ಪಟ್ಟಣ ಪಂಚಾಯತಿ ಸದಸ್ಯರುಗಳಾದ ಅಂದಯ್ಯ ಕಳ್ಳಿಮಠ, ಹನಮಂತಪ್ಪ ಭಜಂತ್ರಿ, ಮುಖಂಡರುಗಳಾದ ವೀರಣ್ಣ ಹುಬ್ಬಳ್ಳಿ. ಕರ್ನಾಟಕ ರಕ್ಷಣಾ ವೇದೀಕೆ ಶಿವರಾಮೇಗೌಡ ಬಣದ ಜಿಲ್ಲಾ ಕಾರ್ಯಾಧ್ಯಕ್ಷ, ರಾಜಶೇಖರ ಹೋಸಳ್ಳಿ, ಕರವೆ ಪ್ರವೀಣ ಶೆಟ್ಟಿ ಬಣದ ತಾಲೂಕ ಅಧ್ಯಕ್ಷ ಶಿವಕುಮಾರ ನಾಗನಗೌಡ್ರ, ಸೇರಿದಂತೆ ಮತ್ತೀತರರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದರು
