IMG-20231101-WA0017

          ನಾಡಹಬ್ಬದಂತೆ ರಾಜೋತ್ಸವ ಆಚರಣೆ

           ಕುಕನೂರ ತಹಶಿಲ್ದಾರ ಚ್ ಪ್ರಾಣೇಶ್ 

ಕರುನಾಡ ಬೆಳಗು ಸುದ್ದಿ

ಕುಕನೂರ 01- ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ನಾಡಬ್ಬದಂತೆ ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು ಎಂದು ಹೆಚ್ ಪ್ರಾಣೇಶ್ ತಹಶೀಲ್ದಾರ್ ಹಾಗೂ ತಾಲೂಕ ಕಾರ್ಯನಿರ್ವಾಹಕ ದಂಡಾಧಿಕಾರಿ ಅವರು ಹೇಳಿದರು.

ಪಟ್ಟಣದ ತಹಸಿಲ್ ಕಚೇರಿಯಲ್ಲಿ ನವಂಬರ್ 1ರಂದು ಬುಧವಾರ ಹಮ್ಮಿಕೊಂಡಿದ್ದ 68ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜ ಧ್ವಜಾರೋನ ನೆರವೇರಿಸಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕರ್ನಾಟಕ ರಾಜ್ಯೋತ್ಸವ ನಾಡ ಹಬ್ಬದಂತೆ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಕರ್ನಾಟಕ ರಾಜ್ಯ ಸಂಸ್ಥಾಪನ ದಿನವನ್ನು ಪ್ರತಿ ವರ್ಷ ನವಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ದಿನವಾಗಿ ಆಚರಿಸಲಾಗುತ್ತದೆ 1956ರ ನವಂಬರ್ 1ರಂದು ದಕ್ಷಿಣ ಭಾರತದ ಕನ್ನಡ ಮಾತನಾಡುವ ಪ್ರದೇಶಗಳ ವಿಲೀನದ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ಸ್ಥಾಪಿಸಲಾಯಿತು. ಕನ್ನಡ ರಾಜ್ಯೋತ್ಸವವನ್ನು ಆಚರಿಸಬೇಕೆಂದರೆ ಯುವಕರು ಮೊದಲು ನಮ್ಮ ಭಾಷೆಯನ್ನು ಸನ್ಮಾನಿಸಬೇಕು. ನಮ್ಮ ನಾಡಿನ ಭಾಷೆಯಲ್ಲಿ ಮಾತನಾಡಬೇಕು. ನಮ್ಮ ಆಹಾರ ಪದ್ಧತಿಯನ್ನು ಎತ್ತಿ ಹಿಡಿಯಬೇಕು.
ಕನ್ನಡದ ಕೆಂಪು ಬಣ್ಣ ಅಭಿವೃದ್ಧಿಯ ಸಂಕೇತವಾಗಿದೆ ಮತ್ತು ಹಳದಿ ಬಣ್ಣ ಶಾಂತಿಯ ಸಂಕೇತವಾಗಿದೆ. ಕನ್ನಡ ಭಾಷೆ, ನೆಲ, ಜಲ, ಕನ್ನಡ ಸಂಸ್ಕೃತಿ ಎಲ್ಲವನ್ನು ಗೌರವದಿಂದ ಕಾಣುವ ಕೆಲಸ ಮಾಡಬೇಕು ಅಂದಾಗಲೇ ಕನ್ನಡದ ಕೀರ್ತಿ ಇನ್ನು ಹೆಚ್ಚು ಬೆಳೆಯುತ್ತದೆ ಎಂದು ಹೇಳಿದರು.
ಭೋಜರಾಜ ಸೂಪ್ಪಿಮಠ ಉಪನ್ಯಾಸಕರು ಮಾತನಾಡಿ, ಕನ್ನಡ ಭಾಷೆಗೆ ಸಾವಿರಾರು ವರ್ಷದ ಇತಿಹಾಸವಿದೆ. ಕನ್ನಡ ಭಾಷೆಗೆ ಸಿಗಬೇಕಾದ ಸೌಲಭ್ಯಗಳು ಇನ್ನು ಹೆಚ್ಚು ಸೌಲಭ್ಯ ಸಿಗುತ್ತಿಲ್ಲ ಅದಕ್ಕೆ ಇನ್ನು ಮುಂದಾದರೂ ಕನ್ನಡ ಭಾಷೆಗೆ ಹೆಚ್ಚಿನ ಸೌಲಭ್ಯ ಸಿಗುವಂತಾಗಬೇಕು, ಕನ್ನಡ ಉಳಿಸಿಕೊಳ್ಳುವ ಸ್ಥಾನಮಾನ ಕೆಲಸವನ್ನು ಯಾವಾಗಲೂ ನಾವು ಮಾಡುತ್ತಿರಬೇಕು. ಕನ್ನಡದ ಕೆಲವು ಜೀವಂತ ಸಮಸ್ಯೆಗಳು ಬದಲಾವಣೆಯಾಗಬೇಕು, ಕರ್ನಾಟಕ ರಾಜ್ಯದಲ್ಲಿ ಕನ್ನಡಿಗರಿಗೆ ಮೊದಲು ಸ್ಥಾನ ಮಾನ ಉದ್ಯೋಗ ಸಿಗುವಂತಾಗಬೇಕು. ಕನ್ನಡವನ್ನು ಪ್ರೀತಿಯಿಂದ ಗೌರವಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಭಾಷಣ ಮತ್ತು ಸಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು, ಉಪನ್ಯಾಸಕ ಭೋಜರಾಜ ಸೊಪ್ಪಿಮಠ ಅವರಿಗೆ ಸನ್ಮಾನ ಮಾಡಲಾಯಿತು.
ನಿರೂಪಣೆ ಬಸವರಾಜ ಪಿ. ಕೆ. ಉಪ ತಹಸಿಲ್ದಾರ್ ಮಂಗಳೂರು ಅವರು ಮಾಡಿದರು.
ಈ ಸಂದರ್ಭದಲ್ಲಿ ಗ್ರೇಡ್ -2 ತಹಸಿಲ್ದಾರ್ ಮುರಳಿಧರ್ ಕುಲಕರ್ಣಿ, ತಹಶೀಲ್ದಾರ್ ಕಚೇರಿಯ ಮುತ್ತಪ್ಪ ಶಿರೆಸ್ತೆದಾರ , ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ವೆಂಕಟೇಶ್ ವಂದಾಲಿ, ಪ.ಪಂ. ಮುಖ್ಯಧಿಕಾರಿ ಪಿ. ಸುಬ್ರಮಣ್ಯ, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ ಶ್ರೀಸಿಂಗ್ ರಾಜಪುತ ಎಫ್ ಡಿ ಸಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕಳಕಪ್ಪ ಕುಂಬಾರ, ಹಿರಿಯ ಪತ್ರಕರ್ತ ಬಸವರಾಜ್ ಕೊಡ್ಲಿ, ಶರಣಪ್ಪ ರಾವಣಕಿ ಶಿಕ್ಷಣ ಇಲಾಖೆ ಸಯೋಜಕ, ಮೇಘರಾಜ್ ಜಿಡಿಗಿ, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!