ಮಂಗಳೂರಲ್ಲಿ ವೀರಭದ್ರೇಶ್ವರ ಗುರುಗಳ ಮಹೋತ್ಸವ
ಕರುನಾಡ ಬೆಳಗು ಸುದ್ದಿ
ಕುಕನೂರ-02ತಾಲೂಕಿನ ಮಂಗಳೂರು ಗ್ರಾಮದ ಶ್ರೀ ವೀರಭದ್ರೇಶ್ವರ ಸೇವಾ ಸಮಿತಿಯವರು ಪೂಜ್ಯರಾದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಅರಳಲೇ ಹಿರೇಮಠ ಮಂಗಳೂರ ಇವರಿಂದ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಬಳಿಕ 101 ಸುಮಂಗಲೆರಿಂದ ಪೂರ್ಣ ಕುಂಭಗಳೊಂದಿಗೆ ಭವ್ಯ ಮೆರವಣಿಗೆ ಶ್ರೀ ಎಸ್ ಎಂ ಚಂದ್ರಶೇಖರಯ್ಯ ಸ್ವಾಮಿ ವೀರಗಾಸೆ ಕಲಾತಂಡದ ತಾರಾ ನಗರದ ಪ್ರಸಿದ್ಧ ಪುರವಂತರು ಇವರ ತಂಡದೊಂದಿಗೆ ಗುಗ್ಗಳದ ಭವ್ಯ ಮೆರವಣಿಗೆ ಗ್ರಾಮದ ಬೀದಿಗುಂಟ ಸಾಗಿ ಸಕಲ ಧರ್ಮದವರ ಪೂಜಾ ವಿಧಾನಗಳನ್ನು ಸ್ವೀಕರಿಸಿದ ಬಳಿಕ ಮರಳಿ ಶ್ರೀ ವೀರಭದ್ರೇಶ್ವರನ ದೇವಸ್ಥಾನಕ್ಕೆ ಬಂದು ಮಹಾಮಂಗಳರತಿ ಸೇವೆ ಆದ ಬಳಿಕ 11ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಕಾರ್ತಿಕೋತ್ಸವದ ಸಂಭ್ರಮ ವಿಜೃಂಭಣೆಯಿಂದ ನೆರವೇರಿತು ಅಪಾರ ಭಕ್ತ ಸಮೂಹಕ್ಕೆ ಶ್ರೀ ವೀರಭದ್ರೇಶ್ವರ ಸೇವಾ ಸಮಿತಿಯವರು ಪ್ರಸಾದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
