ಕನ್ನಡ ಭಾಷೆ ನಾಡು ನುಡಿ ನೆಲ,ಜಲವನ್ನು ಗೌರವಿಸಬೇಕು
ಮಂಡಲಗೇರಿಯಲ್ಲಿ ಶಿಕ್ಷಕ ಸಿ ಎಸ್ ಅಂಗಡಿ
ಕರುನಾಡ ಬೆಳಗು ಸುದ್ದಿ
ಕುಕನೂರ 01- ಕನ್ನಡ ಭಾಷೆ ನಾಡು ನುಡಿ ನೆಲ, ಜಲವನ್ನು ಗೌರವಿಸಬೇಕು ಎಂದು ಸಿ ಎಸ್ ಅಂಗಡಿ ಜಗದ್ಗುರ ತೋಟದಾರ್ಯ ಕೈಗಾರಿಕಾ ತರಬೇತಿ ಕೇಂದ್ರ ಮಂಡಲಗೇರಿ ಶಿಕ್ಷಕ ಅವರು ಹೇಳಿದರು
ತಾಲೂಕಿನ ಮಂಡಲಗಿರಿ ಗ್ರಾಮದಲ್ಲಿ ಮಂಡಲಗೇರಿ ಜಗದ್ಗುರು ತೋಟದಾರ್ಯ ಕೈಗಾರಿಕಾ ತರಬೇತಿ ಕೇಂದ್ರ ಮಂಡಲಗಿರಿಯಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವ ದಿನ ಆಚರಣೆ ಕಾರ್ಯಕ್ರಮದಲ್ಲಿ ಬುಧವಾರ ಅವರು ಮಾತನಾಡಿ, ಕನ್ನಡ ಭಾಷೆ ನಾಡು ನುಡಿ ನೆಲ ಜಲ ಕನ್ನಡಸಂಸ್ಕೃತಿಯನ್ನು ನಾವೆಲ್ಲರೂ ಗೌರವಿಸಬೇಕು.
ಕನ್ನಡದ ಕೆಂಪು ಬಣ್ಣದ ಅಭಿವೃದ್ಧಿಯ ಸಂಕೇತವಾಗಿದೆ ಮತ್ತು ಹಳದಿ ಬಣ್ಣ ಶಾಂತಿಯ ಸಂಕೇತವಾಗಿದೆ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ವಾಕ್ಯಗೆ ನಾವೆಲ್ಲರೂ ಬದ್ಧರಾಗಿರಬೇಕು, ನಮ್ಮ ಕರ್ನಾಟಕ ದಲ್ಲಿ ವಿವಿಧ ರಂಗದಲ್ಲಿ ಸಾಧನೆ ಮಾಡಿದ ನಮ್ಮ ಕೊಪ್ಪಳ ಜಿಲ್ಲೆ ಯಲ್ಲಿ ಸಿಕ್ಕಿದ್ದು ತುಂಬಾ ಹೆಮ್ಮೆಯ ವಿಷಯ ಮತ್ತು 1956 ರಲ್ಲಿ ರಾಜ್ಯ ರಚನೆ ಆಯಿತು ಮತ್ತು 1973 ರಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿ ಆದ ಶ್ರೀ ದೇವರಾಜ ಅರಸು ಇವರು ಕರ್ನಾಟಕ ಎಂಬ ಹೆಸರು ಅಧಿಕೃತ ವಾಗಿ ಅಳವಡಿಸಲಾಗಿದೆ ನಮ್ಮ ರಾಜ್ಯವು ವಿವಿಧ ಕೇತ್ರಗಳಲ್ಲಿ ಅಂದರೆ ಶಿಕ್ಷಣ ಕೈಗಾರಿಕಾ ಕೃಷಿ ಸಾಹಿತ್ಯ ಇನ್ನು ಅನೇಕ ಕೇತ್ರಗಳಲ್ಲಿ ಸಾಧನೆ ಮಾಡಿದ್ದು ನಮ್ಮ ಹೆಮ್ಮೆಯ ವಿಷಯ ಎಂದು ಹೇಳಿದರು .
ಈ ಸಂದರ್ಭದಲ್ಲಿ ಜಗದ್ಗುರು ತೋಟದ ಕೈಗಾರಿಕಾ ತರಬೇತಿ ಕೇಂದ್ರದ ಸಿಬ್ಬಂದಿ ಕೆ. ಆರ್. ಕೋರಿ. ಲಕ್ಷ್ಮಣ್ ಮಡಿವಾಳರ, ಸಂಗಯ್ಯ ಸಾರಂಗಮಠ, ಎಲ್. ಆರ್. ಬಸಪು, ಮುತ್ತಪ್ಪ ಛಲವಾದಿ, ರುದ್ರಯ್ಯ ಕಂತಿ ಇತರರಿದ್ದರು.
