ಮಳೆಯಲ್ಲೆ ನಿರಶನ ಸ್ಥಳದಲ್ಲೇ ರಾತ್ರಿ ಕಳೆದ ಸಂಗಣ್ಣ
ಕರುನಾಡ ಬೆಳಗು ಸುದ್ದಿ
ಕೊಪ್ಪಳ: ರೈತರ ಕೃಷಿ ಪಂಪ್ ಸೆಟ್ ಸೌಲಭ್ಯ ಕಡಿತಗೊಳಿಸಿದ್ದನ್ನು ಖಂಡಿಸಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವ ಸಂಸದ ಸಂಗಣ್ಣ ಕರಡಿ ಸೋಮವಾರ ರಾತ್ರಿ ಮಳೆ ಇದ್ದರು ಸಹ ನಿರಶನ ಸ್ಥಳದಲ್ಲೇ ಕಳೆದರು.
ರಾತ್ರಿ ಮಳೆಯಲ್ಲಿ ನೆಂದರು ಸಹ ನಿರಶನ ಮುಂದು ವರೆಸಿದರು. ಮಲಗುವ ಮುನ್ನ ಆತ್ಮೀಯರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದರು. ಬಳಿಕ ಸ್ವಾಮಿ ವಿವೇಕಾನಂದ, ಬಾಲಗಂಗಾಧರ ತಿಲಕ್ ಇನ್ನಿತರರ ಪುಸ್ತಕ ಓದಿದರು. ನಂತರ ಧರಣಿ ಸ್ಥಳದಲ್ಲೇ ಮಂಚ ಹಾಕಿಕೊಂಡು ಮಲಗಿ ವಿಶ್ರಮಿಸಿದರು. ತಡರಾತ್ರಿ ಮಳೆ ಬಂದರು ಸಹ ನಿರಶನ ಕೈ ಬಿಡಲಿಲ್ಲಾ
ಬೆಳಗಿನಿಂದ ಎಳೆನೀರು ಸೇವಿಸಿದ್ದು, ಅದರಲ್ಲೇ ನಿರಶನ ಮುಂದುವರಿಸಿದ್ದಾರೆ.
ಡಿಸಿ ಬೇಟಿ : ಸಂಸದ ಸಂಗಣ್ಣ ಕರಡಿ ಸತ್ಯಾಗ್ರಹ ಅಂಗವಾಗಿ ರಾತ್ರಿಯೂ ಡಿಸಿ ಕಚೇರಿ ಮುಂಭಾಗದ ಪ್ರತಿಭಟನಾ ಸ್ಥಳದಲ್ಲಿ ಸಮಯ ಕಳೆದರು. ಪ್ರತಿಭಟನೆ ಹಿನ್ನೆಲೆ ಸ್ಥಳಕ್ಕೆ ಬಂದ ಡಿಸಿ ನಲಿನ್ ಅತುಲ್ ಭೇಟಿ ನೀಡಿ ವಿಚಾರಿಸಿದರು. ಸರ್ಕಾರ ಆದೇಶ ಮಾಡುವವರೆಗೂ ಉಪವಾಸ ಸತ್ಯಾಗ್ರಹ ಹಿಂಪಡೆಯುವುದಿಲ್ಲ ಎಂದು ಸಂಗಣ್ಣ ತಿಳಿಸಿದರು.

======
